ಬೆಂಗಳೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಮಿತಿಗೆ ರಾಜ್ಯದ ಹಲವು ಗಣ್ಯರಿಗೆ ವಿವಿಧ ಹೊದ್ದೆಗೆ ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಗೌರವ ಮಾರ್ಗದರ್ಶಕರಾಗಿ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ನಾಗಮೋಹನದಾಸ್, ವಿಜ್ಞಾನಿಗಳಾದ ಎಸ್.ಕೆ ಉಮೇಶ್ ನೇಮಕಗೊಂಡಿದ್ದು, ಅಧ್ಯಕ್ಷರಾಗಿ ವೈಜ್ಞಾನಿಕ ಚಿಂತಕರಾದ ಡಾ.ಹುಲಿಕಲ್ ನಟರಾಜ್ ಹಾಗೂ ಗೌರವ ಅಧ್ಯಕ್ಷರಾಗಿ ನಿವೃತ್ತ ಎಸ್.ಪಿ. ಎಸ್.ಕೆ ಉಮೇಶ್ ಹಾಗೂ ನಿವೃತ್ತ ಎಸಿಪಿ ಲೋಕೇಶ್ವರ್, ಉಪಾಧ್ಯಕ್ಷರಾಗಿ ಅರುಣಕುಮಾರ್ ಡಿ.ಟಿ, ಸಾಹಿತಿ ವಿಶ್ವರಾಧ್ಯ ಸತ್ಯಂ ಪೇಟೆ ಡಾ.ಪಲ್ಲವಿ ಮಣಿ ಹಾಗೂ ಉಮನೂರು ಸಿದ್ದರಾಜು ನೇಮಕಗೊಂಡಿದ್ದಾರೆ.
ಅದೇ ರೀತಿ ಮಹಿಳಾ ಉಪಾಧ್ಯಕ್ಷರಾಗಿ ಮಧುರಾ ಅಶೋಕುಮಾರ್, ಕೆ.ಜೆ ಜಯಲಕ್ಷ್ಮಮ್ಮ, ಗೀತಾ ವಿ ಶಾಂತಕುಮಾರ್ ಹಾಗೂ ಇಂದುಮತಿ ಸಾಲೀಮಠ್, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ದಾನಿರವ್ ಹಾಗೂ ಕಾರ್ಯಾದರ್ಶಿಯಾಗಿ ಸುರೇಶ್ ಎಸ್.ಎಂ, ಸಂಘಟನಾ ಕಾರ್ಯದರ್ಶಿಯಾಗಿ ವಿಟಿ ಸ್ವಾಮಿ ನೇಮಕೊಂಡಿದ್ದು, ಕೋಶಾಧಿಕಾರಿಗಳಾಗಿ ಎಸ್.ವೈ ಹೊಂಬಾಳ್ ನೇಮವಾಗಿದ್ದಾರೆ.
ಮಹಿಳಾ ನಿರ್ದೇಶಕರಾಗಿ ಮೀನಾಕ್ಷಿ ಶಿವಾನಂದ ಕುಡಸೋಮಣ್ಣವರ್, ಶೈಲಜಾ ನಾಗರತ್ನ ಪುಟ್ಟಸ್ವಾಮಿಗೌಡ ಹಾಗೂ ರೇಣುಕಾ ಮಲ್ಲಿಕಾರ್ಜುನ್ ಸಿಂಗೆ, ನಿರ್ದೇಶಕರಾಗಿ ಕೆ.ಎಸ್ ಮಲ್ಲಿಕಾರ್ಜುನಯ್ಯ, ಕೌಶಿಕ್ ಪಿ.ಎಸ್, ಶರಣ ಬಸವ ಕಲ್ಲಾ ಹಾಗೂ ಡಾ ಜಗದೀಶ್ ಪಾಟೀಲ್ ನೇಮಕೊಂಡಿದ್ದು, ಕಾನೂನು ಸಲಹೆಗಾರರಾಗಿ ಇರ್ಷಾದ್ ಅಹಮದ್ ಮತ್ತು ಲೆಕ್ಕ ಪರಿಶೋಧಕರಾಗಿ ಸತೀಶ ಆರ್ ಅವರಿಗೆ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.