ಶಿಕ್ಷಣ ಕ್ಷೇತ್ರಕ್ಕೆ ನಾಂದಿ ಹಾಡಿದವರು ಜ್ಯೋತಿಬಾ ಫುಲೆ: ಯೋಗೇಶ್ ಮಾಸ್ಟರ್

0
108

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಕ್ಷೇತ್ರಕ್ಕೆ ನಾಂದಿ ಹಾಡಿದವರು ಜ್ಯೋತಿಬಾ ಫುಲೆ ಎಂಬುದರಲ್ಲಿ ಯಾವುದೇ ಸಂಶಯ ಬೇಡವೆಂದು ಬರಹಗಾರ ಯೋಗೇಶ್ ಮಾಸ್ಟರ್ ತಿಳಿಸಿದ್ದಾರೆ.

ರವಿವಾರ ಸುಭಾಷ್ ಸೇವಾ ಸಂಸ್ಥೆ, ಗಂಧದನಾಡು ಜನಪರ ವೇದಿಕೆ ವತಿಯಿಂದ ನಗರದ ಆನೇಕಲ್ ತಾಲೂಕಿನಲ್ಲಿ ಆಯೋಜಿಸಿದ್ದ ಸಾವಿತ್ರ ಬಾಫುಲೆ ಜನ್ಮದಿನಾಚರಣೆ ಹಾಗೂ ಸಾವಿತ್ರಿಬಾ ಫುಲೆ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ, ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಒಳಗೊಂಡAತೆ ಎಲ್ಲ ಸಮುದಾಯದವರ ಮಹಿಳೆಯರಿಗೆ ಶಿಕ್ಷಣ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಹಾಗೆ ನೋಡಿದರೆ ಶಿಕ್ಷಕರ ದಿನಾಚರಣೆಯನ್ನು ಸಾವಿತ್ರಿಬಾ ಫುಲೆ ಹೆಸರಿನಲ್ಲಿ ನಡೆಯಬೇಕಿತ್ತು. ಆದರೆ, ನಮ್ಮ ಆಳುವ ಸರಕಾರಗಳು ಅವರಿಗೆ ಬೇಕಾದದವರ ಹೆಸರನ್ನು ಮುನ್ನೆಲ್ಲೆಗೆ ತಂದಿದ್ದಾರೆAದು ಅವರು ತಿಳಿಸಿದರು.

ಈಗ ನಾವು ಹಿಂದೆ ನಡೆದಿರುವ ಕಾರ್ಯಗಳನ್ನು ಟೀಕಿಸುತ್ತಾ, ಸಮಯ, ಶ್ರಮವನ್ನು ಹಾಳು ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ರಚನಾತ್ಮಕ ಕಾರ್ಯದಲ್ಲಿ ತೊಡಗುವ ಮೂಲಕ ಜ್ಯೋತಿ ಬಾಫುಲೆ, ಸಾವಿತ್ರಿಬಾ ಫುಲೆ ಸೇರಿದಂತೆ ಜನಪರವಾಗಿ ಶ್ರಮಿಸಿದವರ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ನ್ಯಾಯದ ಆಶಯಗಳನ್ನಿಟ್ಟುಕೊಂಡವರು ಸಹಕಾರ ತತ್ವ ಹಾಗೂ ಸಂರಚನಾತ್ಮಕ ಕಾರ್ಯಶೈಲಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ತೋರಿಸಬೇಕಾಗಿದೆ. ಆಗ ಮಾತ್ರ ಮುಂದಿನ ಪೀಳಿಗೆಯನ್ನು ಸಶಕ್ತಗೊಳಿಸಲು ಸಾಧ್ಯವೆಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ.ಎಚ್.ಎಸ್.ಭಾಷಾ, ಶಿಕ್ಷಣ ಕ್ಷೇತ್ರದ ಶ್ರಮಿಸುತ್ತಿರುವ ಮಮತಾಗೆ ಜ್ಯೋತಿಭಾ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಸಂಕ್ರಮಣ ಬಳಗದ ಸಂಚಾಲಕಿ ಸಚೀದೇವಿ, ಸೆಂಟ್ ಜೋಸೆಫ್ ಕಾಲೇಜಿನ ಉಪನ್ಯಾಸಕಿ ನೇತ್ರಾವತಿ ರವಿ, ಗಂಧದನಾಡು ಜನಪರ ವೇದಿಕೆಯ ಅಧ್ಯಕ್ಷ ವಿಜಯರಾಮ್, ಬರಹಗಾರ ಮಂಜು ಬಶೀರ್, ಪುರುಷೋತ್ತಮ್, ಅನುರಾಧಾ, ಮುರುಳಿ ಮೋಹನ್, ಶಂಕರ್ ಆನೇಕಲ್ ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here