ಸುರಪುರ ಬಸ್ ನಿಲ್ದಾಣದ ಬಳಿ ಬಲಿಗಾಗಿ ಬಾಯ್ತೆರೆದು ಕುಳಿತಿದೆ ಗುಂಡಿ

0
112
  • ರಾಜುಕುಂಬಾರ ಸುರಪುರ

ಸುರಪುರ: ನಗರದ ಬಸ್ ನಿಲ್ದಾಣದ ಬಳಿಯಲ್ಲಿನ ರಸ್ತೆ ಕಿತ್ತೊಗಿ ತೆಗ್ಗು ಗುಂಡಿಗಳಿಂದ ಸಂಪೂರ್ಣ ಹಾಳಾಗಿದ್ದು,ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯುಂಟಾಗಿದೆ.ಬಸ್ ನಿಲ್ದಾಣದ ಒಳಗಿನಿಂದ ಕೆಂಭಾವಿ ಕಡೆಗೆ ಹೋಗುವ ರಸ್ತೆಯಲ್ಲಿ ಬೃಹತ್ತಾದ ಗುಂಡಿ ಬಿದ್ದು ವರ್ಷಗಳೆ ಕಳೆದರು ಇದುವರೆಗು ಅದನ್ನು ಮುಚ್ಚುವ ಕೆಲಸವನ್ನು ಕೂಡ ಕೆಎಸ್‍ಆರ್‍ಟಿಸಿಯಾಗಲಿ,ನಗರಸಭೆಯಾಗಲಿ ಮತ್ತು ಲೋಕೊಪಯೋಗಿ ಇಲಾಖೆಯಾಗಲಿ ಮಾಡದಿರುವುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.

ಬಸ್ ನಿಲ್ದಾಣದಲ್ಲಿ ಒಬ್ಬ ಗಾರ್ಡಕೂಡ ಇಲ್ಲ,ಗುಂಡಿ ಮುಚ್ಚಿಸದೆ,ಮೂತ್ರಾಲಯ ದುರಸ್ತಿ ಮಾಡಿಸದೆ ಕೆಎಸ್‍ಆರ್‍ಟಿಸಿ ಇಲಾಖೆ ನಿದ್ದೆ ಮಾಡುತ್ತಿದೆ                                                               – ರಾಹುಲ್ ಹುಲಿಮನಿ ಜಿಲ್ಲಾಧ್ಯಕ್ಷರು ಬಹುಜನ ಅಂಬೇಡ್ಕರ ಸಂಘ

Contact Your\'s Advertisement; 9902492681

ಕೆಂಭಾವಿಗೆ ಹೋಗುವ ಮುಖ್ಯ ರಸ್ತೆಯಾಗಿದ್ದು ಇಲ್ಲಿ ನಿತ್ಯವು ನೂರಾರು ವಾಹನಗಳು ಓಡಾಡುತ್ತವೆ.ಅನೇಕ ಬೈಕ್ ಸವಾರರು ಈ ಗುಂಡಿಯಿಂದಾಗಿ ಅಪಾಯಕ್ಕೊಳಗಾಗಿದ ಉದಾಹರಣೆಗಳು ಇವೆ.ಅಲ್ಲದೆ ಕೆಂಭಾವಿ ಕಡೆಗೆ ಹೋಗುವ ಬಸ್ಸುಗಳು ಈ ಗುಂಡಿಯಲ್ಲಿ ಚಕ್ರ ಸಿಲುಕಿ ಪರದಾಡುವ ಸಂಗತಿ ನಿತ್ಯವು ಸಾಮಾನ್ಯವಾಗಿದೆ.ಇದನ್ನೆಲ್ಲ ನೊಡಿಯು ಯಾವ ಇಲಾಖೆಯು ಇದನ್ನು ದುರಸ್ತಿ ಮಾಡಿಸದೆ ನಿರ್ಲಕ್ಷ್ಯ ತೋರಿದ್ದಕ್ಕೆ ಜನರು ಬೇಸತ್ತಿದ್ದಾರೆ.
ಇನ್ನು ಬಸ್ ನಿಲ್ದಾಣದಲ್ಲಿ ನಿರ್ಮಿಸಲಾದ ಮೂತ್ರ ವಿಸರ್ಜನಾಲಯ ದುರ್ನಾತದಿಂದ ಜನತೆ ಮೂಗು ಮುಚ್ಚಿಕೊಂಡೆ ಮುತ್ರ ವಿಸರ್ಜನೆ ಮಾಡುವಂತಾಗಿದೆ.

ಅಲ್ಲದೆ ಈ ಮೂತ್ರಾಲಯಕ್ಕೆ ಬಸ್ ಗುದ್ದಿದ ಪರಿಣಾಮವಾಗಿ ಗೋಡೆ ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವಾಗ ಬೇಕಾದರು ಬೀಳುವಂತಾಗಿದೆ.ಆದರೆ ಕೆಎಸ್‍ಆರ್‍ಟಿಸಿ ದುರಸ್ತಿ ಮಾಡಿಸದೆ ನಿರ್ಲಕ್ಷ್ಯ ತೋರುತ್ತಿದ್ದು,ಇಲಾಖೆಯ ಬಗ್ಗೆ ಜನರು ಆಕ್ರೋಶಗೊಳ್ಳುವಂತಾಗಿದೆ.

ರಸ್ತೆಯಲ್ಲಿನ ಗುಂಡಿ ಮುಚ್ಚುವುದು ಹಾಗು ಕೂಡಲೆ ಮೂತ್ರಾಲಯದ ಗೋಡೆ ದುರಸ್ತಿಗೊಳಸಿ,ಮೂತ್ರಾಲಯದ ಸ್ವಚ್ಛತೆಗೆ ಮುಂದಾಗದಿದ್ದಲ್ಲಿ ಬಹುಜನ ಅಂಬೇಡ್ಕರ ಸಂಘವು ಸಾರ್ವಜನಿಕರೊಂದಿಗೆ ಈ ಎಲ್ಲಾ ಇಲಾಖೆಗಳ ವಿರುಧ್ಧ ಹೊರಾಟ ನಡೆಸಲಿದೆ ಎಂದು ಬೇಸರದಿಂದ ಹೇಳುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here