ಯಾದಗಿರಿ ಜಿಲ್ಲೆ ಸರ್ಕಾರಿ ನೌಕರರ ಸಂಘಕ್ಕೆ 47 ಅವಿರೋಧ, 7 ಜನ ಚುನಾಯಿತರಾಗಿ ಆಯ್ಕೆ

0
99

ಯಾದಗಿರಿ  ಪ್ರಸಕ್ತ ೨೦೧೯-೨೦೨೪ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ನೂತನ ಕಾರ್ಯಕಾರಿ ಸಮಿತಿಗೆ ಒಟ್ಟು ೫೪ ಜನ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಸಮಿತಿಗೆ ಚುನಾವಣೆಯಲ್ಲಿ ೪೭ ಜನ ಅವಿರೋಧ ಆಯ್ಕೆಯಾದರು. ಇನ್ನುಳಿದ ೭ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಪಶು ಸಂಗೋಪನೆಯಿಂದ ಸಂಜೀವರೆಡ್ಡಿ ಮತ್ತು ಹಂಪೇಶ, ಲೋಕೋಪಯೋಗಿ ಮತ್ತು ಜಿಪಂ ಎಂಜಿನಿಯರಿಂಗ್ ಇಲಾಖೆಯಿಂದ ವೆಂಕಟೇಶ, ಆರ್.ಎಂ. ನಾಟೇಕರ್, ಸರ್ಕಾರಿ ಕಿರಿಯ ಮಹಾವಿದ್ಯಾಲಯದಿಂದ ಶಂಕರ ಲಿಂಗಪ್ಪ ಗೂಳಿ, ಸರ್ಕಾರಿ ಪ್ರೌಢಶಾಲೆಯಿಂದ ಸಾಯಪ್ಪ ಚಂಡ್ರಕಿ ಮತ್ತು ಚಾಂದಸಾಬ ಚುನಾವಣೆ ಮೂಲಕ ಆಯ್ಕೆಯಾದರು.
ಅವಿರೋಧ ಆಯ್ಕೆಯಾದವರು
ಕೃಷಿ ಇಲಾಖೆಯಿಂದ ವೆಂಕಟೇಶ ಎಂ. ಹಿರೇನೂರು, ಯಮಾರೆಡ್ಡಿ ಮುಂಡಾಸ, ಕಂದಾಯ  ಸಾಯಿಬಣ್ಣ, ಮಡಿವಾಳಪ್ಪ, ಗಿರೀಶ ವಿ. ರಾಯಕೋಟಿ, ಆಹಾರ  ಮಲ್ಲಿಕಾರ್ಜುನ ಸಿ. ಕೊಲ್ಲೂರು, ಸಾಂಖಿಕ ಇಲಾಖೆ  ಸಂತೋಷ ಕುಮಾರ, ವಾಣಿಜ್ಯ ತೆರಿಗೆ  ಶ್ರೀಮತಿ ನೀಲಮ್ಮ ಆಮದಾನಿಮಠ, ಸಹಕಾರ ಇಲಾಖೆ  ಸಿದ್ದಣ್ಣ ಎಸ್. ಕುಂಬಾರ, ಜಿಲ್ಲಾ ಪಂಚಾಯಿತಿ  ಶಿವರಾಯ, ಅಬಕಾರಿ ಇಲಾಖೆ  ಪಾಂಡುರಂಗ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ವೆಂಕಟೇಶ, ಶ್ರೀಹರಿ ಘಂಟಿ, ಮೀನಾಗರಿಕೆ  ಶೀಲಮ್ಮ, ಅರಣ್ಯ  ರೇಣುಕಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಪರಮರೆಡ್ಡಿ, ಮಹಿಪಾಲರೆಡ್ಡಿ, ಮಲ್ಲಿಕಾರ್ಜುನ,
ಜಿಲ್ಲಾಸ್ಪತ್ರೆ  ಗೋವಿಂದಮೂರ್ತಿ, ಶರಣಗೌಡ, ಆಯುಷ್ ಇಲಾಖೆ  ಡಾ. ಪ್ರಕಾಶ ರಾಜಾಪೂರ, ತೋಟಗಾರಿಕೆ ಇಲಾಖೆ  ಶರಣಪ್ಪ, ವಾರ್ತಾ ಇಲಾಖೆ  ರಾಜರತ್ನ ಡಿ.ಕೆ., ಕೆಜಿಐಡಿ ಇಲಾಖೆ  ಬಾಲಕೃಷ್ಣ, ಪ್ರಾಥಮಿಕ ಶಾಲೆಗಳ ವಿಭಾಗ  ಕೃಷ್ಣಾರೆಡ್ಡಿ, ಬಸವರಾಜ, ಬಸವರಾಜ ಸಿ., ಮಹೇಶ ಪಾಟೀಲ್. ಪದವಿ ಮಹಾವಿದ್ಯಾಲಯ  ಶರಣಬಸಪ್ಪ ರಾಯಕೋಟಿ, ಎ.ಪಿಎಂಸಿ  ರಾಚಣ್ಣಗೌಡ ಮುಷ್ಟೂರು, ಪೊಲೀಸ್ ಇಲಾಖೆ  ಲಕ್ಷ್ಮೀಕಾಂತ, ರೇಷ್ಮೆ ಇಲಾಖೆ  ಬಿ. ಸಾಬರೆಡ್ಡಿ, ಭೂ ಮಾಪನ ಇಲಾಖೆ  ಚಂದ್ರಶೇಖರ. ಖಜಾನೆ ಇಲಾಖೆ  ಮಲ್ಲಿಕಾರ್ಜುನ, ಕಾರ್ಮಿಕ ಇಲಾಖೆ  ರಾಜಶೇಖರ ಯಕ್ಕೆಳ್ಳಿ, ನಗರ ಯೋಜನಾ ಇಲಾಖೆ  ಶಶಿಧರರೆಡ್ಡಿ, ಉದ್ಯೋಗ ತರಬೇತಿ ಇಲಾಖೆ (ಐ.ಟಿ.ಐ.) ಸಂತೋಷಕುಮಾರ ನೀರೇಟಿ, ಧಾರ್ಮಿಕ ದತ್ತಿ ಇಲಾಖೆ  ವಿಶ್ವಾರಾಧ್ಯ ಹಿರೇಮಠ, ನ್ಯಾಯಾಂಗ ಇಲಾಖೆ  ವಿಶ್ವಾರಾಧ್ಯ, ಭರತ, ತಾಲ್ಲೂಕು ಪಂಚಾಯಿತಿ  ಮೌಲಾಲಿ, ಸಿದ್ದಣ್ಣ ಎಚ್., ವಯಸ್ಕರ ಶಿಕ್ಷಣ ಇಲಾಖೆ  ಶ್ರೀಶೈಲ ಹೊಸಮನಿ. ಡಯಟ್ ಕಾಲೇಜು ಶಿವಪ್ಪ ಅವರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ. ಮಲ್ಲಿಕಾಜುನ ಸಹಾಯಕ ಚುನಾವಣಾಧಿಕಾರಿ ವಿಶ್ವನಾಥ ಲದ್ದಿ ತಿಳಿಸಿದ್ದಾರೆ.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here