ಜಿಲ್ಲಾ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಸುವರ್ಣಾ ಅರ್ಜುಣಗಿ ದಂಪತಿ ಸನ್ಮಾನ

0
22

ಸುರಪುರ: ಯಾದಗಿರಿ ಜಿಲ್ಲಾ ಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಸುವರ್ಣಾ ಅರ್ಜುಣಗಿ ದಂಪತಿಗಳಿಗಾಗಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡು ಅರ್ಜುಣಗಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ನಗರದ ಜನನಿ ಕಾಲೇಜಿನ ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಕಮತಗಿ ಮಾತನಾಡಿ,ಸಮಾಜವನ್ನು ತಿದ್ದುವ ಶಕ್ತಿ ಉಪನ್ಯಾಸಕರಿಗಿದ್ದು, ಅವರು ಮಾಡುವ ಕಾರ್ಯನಿರ್ವಹಣೆಯನ್ನು ಪ್ರಶಸ್ತಿಗಳೇ ಪ್ರಸ್ತುತ ಪಡಿಸುತ್ತವೆ ಎಂದರು.

Contact Your\'s Advertisement; 9902492681

ಪ್ರಶಸ್ತಿಗಳು ಉಪನ್ಯಾಸಕರ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ, ಪ್ರಶಸ್ತಿಗಳೇ ಉಪನ್ಯಾಸಕರ ಸಾಧನೆಯ ಮೈಲುಗಲ್ಲುಗಳ ನೆನೆಪಿನ ಬುತ್ತಿಯನ್ನು ಬಿಚ್ಚಿಡುತ್ತವೆ. ಶಿಕ್ಷಕರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾರೆ. ಅವರ ಕಾರ್ಯ ಎಲ್ಲರಿಗೂ ಮಾದರಿ.ಇದಕ್ಕೆ ತಾಜಾ ಉದಾಹರಣೆ ಎಂದರೆ ಉಪನ್ಯಾಸಕಿ ಸುವರ್ಣಾ ಅರ್ಜುಣಗಿ ಅವರು ಜಿಲ್ಲಾಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದಿರುವುದು ಅವರ ಪರಿಶ್ರಮಕ್ಕೆ ದೊರೆತ ಪ್ರತಿಫಲ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಸುವರ್ಣಾ ಅರ್ಜುಣಗಿ ದಂಪತಿಯನ್ನು ಸನ್ಮಾಸಲಾಯಿತು. ಕಾರ್ಯಕ್ರಮದಲ್ಲಿ ಸರಕಾರಿ ಬಾಲಕರ ಪ್ರೌಢಶಾಲೆಯ ಉಪಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರು ಅಧ್ಯಕ್ಷತೆ ವಹಿಸಿದ್ದರು. ಚಾಮನಾಳ ಪಪೂ ಕಾಲೇಜ್ ಪ್ರಾಂಶುಪಾಲ ಬಸವರಾಜ್ ಇನಾಮದಾರ, ತಾಲೂಕು ಉಪ ಖಜನಾಧಿಕಾರಿ ಮೋನಪ್ಪ ಶಿರವಾಳ, ಪರಿಸರ ಅಭಿಯಂತರ ಸುನೀಲ್, ಬಾಲಕಿಯರ ಪಪೂಕಾಲೇಜಿನ ಪ್ರಾಂಶುಪಾಲರಾದ ಸಯ್ಯದಾಬಿ ಜಮಾದಾರ, ಶಕುಂತಲಾ ತುಪ್ಪಸಕ್ರೆ, ಸುರೇಶ, ದಂತವೈದ್ಯ ಹರ್ಷವರ್ಧನ ರಫಗಾರ, ಬಸಪ್ಪ ಸಲೆಗಾರ್, ಶಿವಪ್ಪ ಕಟ್ಟಿಮನಿ, ಗಿರೀಶ್ ಕಟ್ಟಿಮನಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here