ಕಲಬುರಗಿ: ಇಲ್ಲಿನ ಜೆಮ್ಸ್ ಆಸ್ಪತ್ರೆಯ ಮಲ್ಟಿ ಫಂಕ್ಷನಲ್ ಡಾಯಲಿಸಿಸ್ ಯಂತ್ರದಲ್ಲಿ ತಾಂತ್ರಿಕ ದೊಶದಿಂದಾಗಿ 10ಕ್ಕೂ ಹೆಚ್ಚು ರೋಗಿಗಳು ಐಸಿಓ ವಾರ್ಡ್ ಗೆ ದಾಖಲಿಸುವಂತ ಘಟನೆ ಹಾಗೂ ಶಾಹಾಬಾದ್ ಗ್ರಾಮದ 16 ವರ್ಷದ ಯುವಕ ಆಕಾಶ್ ನಿಧನ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಜೆಮ್ಸ್ ಆಸ್ಪತ್ರೆಯ ಜಿಲ್ಲಾ ತಜ್ಞ ಹಾಗೂ ಆಸ್ಪತ್ರೆಯ ಅಧಿಕ್ಷಕರಿಗೆ ಆಯೋಗ ನೂಟಿಸ್ ನೀಡಿದೆ.
ಯಂತ್ರದಲ್ಲಿ ತಾಂತ್ರಿಕ ದೋಶದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಕುರಿತು ಕಲಬುರಗಿ ಜಿಲ್ಲಾ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಸದಸ್ಯರಾದ ಮೊಹಮ್ಮದ್ ರೀಯಾಜೋದ್ದಿನ್ ಖತೀಬ್ ಅವರ ಸಲ್ಲಿಸಿದ ದೂರನ್ನು ಪರಿಶೀಲಿಸಿದ ಪ್ರಕರಣದ ಕುರುತು ವಿಚಾರಣೆ ನಡೆಸಿ ಘಟನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ವೈಕ್ತಿಕವಾಗಿ ಹಾಜರಾಗುವಂತೆ ಆಯೋಗ ನೂಟಿಸ್ ಜಾರಿಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಮಾನವ ಹಕ್ಕುಗಳ ಹೋರಾಟಗಾರಾದ ಮೊಹಮ್ಮದ್ ರೀಯಾಜೋದ್ದಿನ್ ಖತೀಬ್ ಇ-ಮೀಡಿಯಾ ಲೈನ್ ಜೊತೆ ಮಾತನಾಡಿ, ಜೆಮ್ಸ್ ಅಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆಯಲ್ಲಿದ್ದ, ಸುಮಾರು 10ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ಹದಗೇಟ್ಟು SICU ಮತ್ತು ICU ವಾರ್ಡ್ ಗೆ ದಾಖಲಿಸಲಾಗಿತ್ತು. ಆದರೆ ಘಟನೆಯಿಂದಾಗಿ ಆಕಾಶ್ ಮೃತಪಟ್ಟಿದ್ದು, ಆಯೋಗಿದಿಂದ ಕುಟುಂಬಕ್ಕೆ ನ್ಯಾಯಸಿಗಬೇಕೆಂಬ ಆಶಯ ನಮದಾಗಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.