ಸುರಪುರ: ಸರಕಾರ ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಯೋಜನೆ ಜಾರಿಗೊಳಿಸಿದ್ದರಿಂದ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯಿಂದ ಸ್ವಚ್ಛ ಶ್ರದ್ಧಾ ಕೇಂದ್ರ ಕಾರ್ಯಕ್ರಮದ ಮೂಲಕ ಧಾರ್ಮಿಕ ಕೇಂದ್ರಗಳ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಗೌರವಯುತ ಕಾರ್ಯವಾಗಿದೆ ಎಂದು ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ ತಿಳಿಸಿದರು.
ನಗರದ ಮುಲ್ಲಾ ಮೊಹಲ್ಲಾದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಸ್ವಚ್ಛ ಶ್ರಧ್ಧಾ ಕೇಂದ್ರ ಎಂಬ ನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃಧ್ಧಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರ ಮನದಲ್ಲಿ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅನೇಕ ಮಹಿಳೆಯರಿಂದ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.ಸಂಸ್ಥೆಯ ಎಫ್.ಎಸ್ ಆದ ರೇಖಾ ಹಾಗು ಸಂಘಗಳ ಮೇಲ್ವಿಚಾರಕರಾದ ಸಿದ್ದಮ್ಮ ಸೇರಿದಂತೆ ಅನೇಕ ಜನ ಮಹಿಳೆಯರಿದ್ದರು.