ವಾಡಿ: ಸವಿತಾ ಸಮಾಜ ಮೀಸಲಾತಿ ಹೋರಾಟದ ಕುರಿತು ಚರ್ಚಿಸಲು ಜ.೧೯ ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧೀಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ವಾಮೀಜಿ, ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಸವಿತಾ ಸಮುದಾಯದ ಮೀಸಲಾತಿ ಹಕ್ಕಿಗಾಗಿ ಹೋರಾಟವನ್ನು ಮುಂದುವರೆಸುವ ಕುರಿತು ಪ್ರಾಸ್ತಾಪಿಸಿದ್ದಾರೆ. ಸವಿತಾ ಸಮಾಜದ ರಾಜ್ಯ ಸಮಿತಿಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಂದಿನ ನಾಯಿಂದ ಅಥವ ಇಂದಿನ ಸವಿತಾ ಸಮುದಾಯದ ಹೆಸರಿನಡಿ ಗುರುತಿಸಲ್ಪಡುತ್ತಿರುವ ಎಲ್ಲಾ ಉಪಜಾತಿ/ಉಪ ಪಂಗಡಗಳ ಸಂಘಟನೆಗಳ ಪದಾಧಿಕಾರಿಗಳು ಮತ್ತು ಆಸಕ್ತ ಮುಖಂಡರುಗಳು ಹೋರಾಟದ ರೂಪರೇಷ ಸಿದ್ಧಗೊಳಿಸಲು ಸಲಹೆ ಸೂಚನೆಗಳನ್ನು ನೀಡಲು ಸಭೆಯಲ್ಲಿ ಹಾಜರಿರಬೇಕು ಎಂದು ಶ್ವಾಮೀಜಿ ಕೋರಿದ್ದಾರೆ.
ಸಭೆಯಲ್ಲಿ ಭಾಗವಹಿಸುವವರು ಮುಂಚಿತವಾಗಿಯೇ ಹೆಸರು ನೊಂದಾಯಿಸಲು ದೂ.7019730817, 9535542727 ಕ್ಕೆ ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.