ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ: ಲಕ್ಷ್ಮಣ ದಸ್ತಿ

0
48

ಕಲಬುರಗಿ: ಇಂದಿನ ಯುವಕರಿಗೆ ದೇಶ ಪ್ರೇಮ ಜಾಗೃತಿ ಮೂಡಿಸಬೇಕಾದರೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಹಾಗೂ ದೇಶ ಪ್ರೇಮ ಮನೋಭಾವ ತಿಳಿಸುವ ಕಾರ್ಯ ಅಗತ್ಯ ಎಂದು ಹಿರಿಯ ಹೋರಾಗಾರ ಲಕ್ಷ್ಮಣ ದಸ್ತಿ ಅವರು ತಿಳಿಸಿದರು.

ನಗರದ ಹಿಂದಿ ಪ್ರಚಾರ ಸಭಾದಲ್ಲಿ ನಡೆದ ಚಿಂತನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿ ಮಾಡಬಲ್ಲರು. ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಅನನ್ಯ. ಅವರನ್ನು ಸ್ಮರಿಸಲು ವಿವಿಧ ರೀತಿಯ ಜಾಗೃತಿ ಮೂಡಿಸಲು ಚಿಂತನಾ ಸಭೆಗಳು,ಕಲ್ಯಾಣ ಕರ್ನಾಟಕ ಪ್ರದೇಶ ಶ್ರಿಮಂತವಾಗಿದೆ. ಆದರೆ ಜನಪ್ರತಿನಿಧಿಗಳ ನೀರ್ಲಕ್ಷ್ಯ ಧೋರಣೆಯಿಂದ ಹಿಂದುಳಿದ ಹಣೆ ಪಟ್ಟಿ ಲಭಿಸಿದೆ ಎಂದರು.

Contact Your\'s Advertisement; 9902492681

ಈ ಭಾಗದಲ್ಲಿ ಸರ್ದಾರ್ ಪಟೇಲ್ ಅವರಿಗೆ ನಮ್ಮ ಭಾಗದ ಜನಮಾನಸದ ನೋವನ್ನು ಜೋತೆಗೆ ಹೈದರಾಬಾದ್ ಕರ್ನಾಟಕ ಭಾರತದಲ್ಲಿ ವಿಲಿನ ಆಗಲು ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಶರಣಗೌಡ ಇನಾಂದಾರ್,ರಾಮಚಂದ್ರ ವಿರಪ್ಪ,ವಿಧ್ಯಾದರ ಗುರುಜಿ,ಹಕಿಕತರಾವ ಚುಡಗುಪ್ಪಿ, ಚಂದ್ರಶೇಖರ ಮಹಾಗಾಂವ, ಶಿವಮೂರ್ತಿಸ್ವಾಮಿ ಅಳವಂಡಿ ಸೇರಿದಂತೆ ಅನೇಕರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ವಾಯಿತು.ಇಂಥ ಮಹಾನ್ ದೇಶಭಕ್ತರ ಇಂದಿನ ಪಿಳೀಗೆಗೆ ತಿಳಿಸುವುದು ಅಗತ್ಯ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ್ ಗುರೂಜಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತೆನೆ ಎಂದರು.ಹೊರಾಟಗಾರ ಲಿಂಗರಾಜ ಸಿರಗಾಪೂರ ಮಾತನಾಡಿ ಶೀಘ್ರವೇ ವಿವಿಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಹೊರಾಟಗಾರರಾದ ಎ.ಎಸ್.ಭದ್ರಶೆಟ್ಟಿ, ಕಲ್ಯಾಣರಾವ ಪಾಟೀಲ್, ನಿಂಗಣ್ಣ ಉದನೂರ, ಅಬ್ದುಲ್ ರಹೀಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here