ಆಳಂದ: ತಾಲೂಕಿನ ನಿಂಬರ್ಗಾ ಗ್ರಾಮ ಪಂಚಾಯತ್ ಗೆ ನೂತನವಾಗಿ ಆಯ್ಕೆಯಾದ ಸದಸ್ಯರು ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ಶ್ರಮಿಸುವಂತೆ ನಿಂಬರ್ಗಾ ಪಿ.ಎಸ್.ಐ. ಸುವರ್ಣ ಮಲಶೆಟ್ಟಿ ಸಲಹೆ ನೀಡಿದರು.
ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಲ್ಲಾ ಸದಸ್ಯರಿಗೂ ಸನ್ಮಾನಿಸಿ ಹಳ್ಳಿಯ ಜನ ಭರವಸೆ ಇಟ್ಟು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ ಜನರ ಭರವಸೆ ಉಳಿಸಿಕೊಂಡು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಯಶವಂತರಾವ್ ಹೊಸಮನಿ, ಬಿ.ಎಸ್.ಮಿಟೆಕಾರ, ಈರಣ್ಣ ಯಳಸಂಗಿ, ಈರಣ್ಣ ಬಿರೆದಾರ, ಈರಣ್ಣ ನಾಗಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.