ಜನತಾ ಬಜಾರದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆಗೆ ಕಾಂಗ್ರೆಸ್ ಆಕ್ರೋಶ

0
51

ಕಲಬುರಗಿ: ಜನತಾ ಬಜಾರದ ಅಧ್ಯಕ್ಷ  ಹಾಗೂ  ಉಪಾಧ್ಯಕ್ಷ  ಸ್ಥಾನಗಳಿಗೆ ನಡೆಯಬೇಕಿದ್ದ  ಚುನಾವಣೆ ಬಿಜೆಪಿ  ಸರಕಾರ  ಕುಂಟುನೇಪ ನೀಡಿ ಮುಂದುಡಿರುವುದು ಜನವಿರೋಧಿ, ಸಂವಿಧಾನ ವಿರೋಧಿ  ನಡೆಯಾಗಿದೆ ಎಂದು  ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಗದೇವ ಗುತ್ತೇದಾರ ಕಾಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜನತಾ ಬಜಾರದಲ್ಲಿ ಕಾಂಗ್ರೆಸ್  ಪಕ್ಷಕ್ಕೆ  ನಿಶ್ಚಳ  ಬಹುಮತವಿದ್ದು  ಬಿಜೆಪಿಗೆ  ಅಧಿಕಾರ  ತಪ್ಪುತ್ತದೆ  ಎಂಬ ಉದ್ದೇಶದಿಂದ  ಚುನಾವಣೆಯನ್ನು  ಮುಂದುಡಿರುತ್ತಾರೆ ಆದರೆ, ಬಿಜೆಪಿಗೆ  ಸೋಲು ಕಟ್ಟಿಟ್ಟ  ಬುತ್ತಿ ಆಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ  ಹಿಂದೆ ಕಲಬುರಗಿ-ಯಾದಿಗರಿ  ಡಿಸಿಸಿ  ಬ್ಯಾಂಕ್  ಚುನಾವಣೆ ನಡಿಸಿದಂತೆ ವಾಮ  ಮಾರ್ಗದ ಮೂಲಕ ಕಾನೂನು  ಗಾಳಿಗೆ  ತೂರಿ ಅಧಿಕಾರ ದುರುಪಯೋಗಪಡಿಸಿಕೊಂಡು ಡಿಸಿಸಿ ಬ್ಯಾಂಕಿನಲ್ಲಿ  ಅಧಿಕಾರಕ್ಕೆ  ಬಂದಿರುವ ಹಾಗೆ ಜನತಾ ಬಜಾರದಲ್ಲಿಯೂ  ಕೂಡಾ ಅಧಿಕಾರ  ದುರುಪಯೋಗ ನಡೆಸಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಚುನಾವಣೆ ಮುಂದುಡಿದ್ದು ಕಂಡುಬರುತ್ತದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ  ಯವರು  ಜಿಲ್ಲೆಯ ಅಭಿವೃದ್ಧಿ ಕಡೆ  ಕಿಂಚಿತ್ತೂ ಕಾಳಜಿ ವಹಿಸದೆ ಕಾಂಗ್ರೆಸ್  ಪಕ್ಷಕ್ಕೆ  ಬಹುಮತ  ನೀಡಿದ ಜನರ ತಿರ್ಪಿನ ವಿರುದ್ದ  ನಡೆದುಕೊಂಡು ಕಾನೂನು ಗಾಳಿಗೆ ತೂರಿ ಅಧಿಕಾರ ದುರುಪಯೋಗಪಡಿಸಿಕೊಂಡು ವಾಮ ಮಾರ್ಗದ ಮೂಲಕ  ಅಧಿಕಾರ ಪಡೆದುಕೊಳ್ಳುತ್ತಿರುವ ನೀತಿಯನ್ನು  ನೋಡಿದರೆ ಬಿಜೆಪಿ ಸರಕಾರ ಅಧಿಕಾರದ  ಆಸೆಗಾಗಿ  ಯಾವ  ಕೀಳು  ಮಟ್ಟಕ್ಕಾದರೂ ಇಳಿಯುತ್ತಿದ್ದಾರೆಂದು ಕೀಡಿಕಾರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here