ಕರ್ಮಯೋಗಿ ಸಿದ್ಧರಾಮೇಶ್ವರರ ಜನ್ಮ ದಿನಾಚರಣೆ

0
65

ಕುಕನೂರ (ಕೊಪ್ಪಳಜಿಲ್ಲೆ): ‘ಕಾಯಕ ಮತ್ತು ಶ್ರಮ ಸಂಸ್ಕೃತಿಗೆ ಶಿವಯೋಗಿ ಸಿದ್ದರಾಮೇಶ್ವರರು ತೋರಿದ ಮಾರ್ಗ ನಮ್ಮೆಲ್ಲರಿಗೂ ಮಾದರಿ, ಎಂದು ಶಾಲೆಯ ಉಪ ಪ್ರಾಂಶುಪಾಲರಾದ ಸೋಮಶೇಖರ್ ಎಲ್ ಲಮಾಣಿ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ವಿದ್ಯಾನಂದ ಗುರುಕುಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾಯಕಯೋಗಿ ಸಿದ್ಧರಾಮೇಶ್ವರರು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ 12ನೇ ಶತಮಾನದಲ್ಲಿ ತಾಂಡವಾಡುತ್ತಿದ್ದ ಜಾತಿ ಪದ್ಧತಿ, ಅಸಮಾನತೆ, ಮೌಢ್ಯವನ್ನು ತಮ್ಮ ವಚನಗಳ ಮೂಲಕ ಹಿಮ್ಮೆಟ್ಟಿಸುವಲ್ಲಿ ಶರಣರು ಮಾಡಿದ ಸಾಮಾಜಿಕ ಕ್ರಾಂತಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು ಎಂದರು. ಇಂದಿನ ಮಹಾರಾಷ್ಟ್ರದ ಸೊನ್ನಲಿಗೆ ಗ್ರಾಮದಲ್ಲಿ ಜನ್ಮತಾಳಿದ ಸಿದ್ದರಾಮೇಶ್ವರರು ಅಂದಿನ ಕಾಲದಲ್ಲಿ ಅಂತರ್ಜಲ ಹೆಚ್ಚಿಸಲು ನಾನಾಕಡೆ ಕೆರೆ ಕಟ್ಟುವುದು, ಕೋಟೆ ನಿರ್ಮಾಣ, ಗುಡಿಗೋಪುರ ನಿರ್ಮಿಸುವುದು ಹಾಗೇ ಇಂದು ಪ್ರದೇಶ ಪ್ರಸಿದ್ಧಿ ಪಡೆದಿರುವ ಸಾಮೂಹಿಕ ವಿವಾಹಗಳು ಸಿದ್ದರಾಮೇಶ್ವರ ನೆರವೇರಿಸುತ್ತಿದ್ದರು ಎಂಬುದು ದಾಖಲೆಗಳಿಂದ ತಿಳಿದುಬಂದಿದೆ ಎಂದು ಹೇಳಿದರು.

ಬಸವಕಲ್ಯಾಣದಲ್ಲಿ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದಲ್ಲಿ ಮೂರನೇ ಅಧ್ಯಕ್ಷ ಸ್ಥಾನ ಗಳಿಸಿದ ಸಿದ್ದರಾಮೇಶ್ವರರು, ಅವರ ವಚನಗಳು ರಚನೆ ಮಾಡಿ ಜನರಿಗೆ ಹಲವಾರು ವಿಷಯ ಮೂಲಕ ಸಮಾಜದ ಬದಲಾವಣೆಗೆ ಬೆಳಕಾಗಿದ್ದರು ಎಂದರು.
ಇವರು ಭೋವಿ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ ವಚನಕಾರರು ಎಲ್ಲರನ್ನು ಒಳಗೊಂಡ ಪ್ರಮುಖ ಕರ್ಮಯೋಗಿ ಆಗಿದ್ದರು. ಇವರ ಹೆಸರಿನಲ್ಲಿ ರಾಜ್ಯ ಸರ್ಕಾರ ಜಯಂತಿ ಆಚರಿಸುತ್ತಿರುವುದು ಹರ್ಷದಾಯಕ ಎಂದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಸಿಬ್ಬಂದಿಗಳಾದ ಶಿವಕುಮಾರ ಹೆಳವರ್, ರಾಜು ಪೂಜಾರ, ಉಮಾ ದೇಸಾಯಿ, ಗೀತಾ ಪದಕಿ, ಆರ್. ಎಮ್.ದೇವರೆಡ್ಡಿ, ಶ್ರೀಲತಾ ಕೆ, ವಿದ್ಯಾಪತಿ, ಅರುಂದತಿ ಬಟನೂರ,ಉದಯ ನಿಂಗಾಪುರ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here