ಸಂಕ್ರಾಂತಿ ಎಂದರೆ, ಹೆಸರೇ ಸೂಚಿಸುವುಂತೆ ಒಳಿತನ್ನುಂಟುಮಾಡುವಂಥ ಹೊಸ ಬದಲಾವಣೆ. ಧನಾತ್ಮಕ ಪರಿವರ್ತನೆಗೆ ನಾಂದಿಹಾಡುವ ಈ ಹಬ್ಬದಲ್ಲಿ ಸೂರ್ಯನನ್ನು ಆರಾಧಿಸಲಾಗುತ್ತದೆ. ಮೈಕೊರೆವ ಚಳಿಯಿಂದ ತತ್ತರಿಸಿ, ಹೊಲ-ಗದ್ದೆಗಳ ಕೆಲಸಗಳತ್ತ ಮುಖಮಾಡಲೂ ಹಿಂಜರಿಯುತ್ತಿರುವವರಿಗೆ ಸೂರ್ಯನ ಪ್ರಖರ ಕಿರಣಗಳು ಮೈಗೆ ಸೋಂಕಿ ಹೊಸ ಹುರುಪು ನೀಡುತ್ತವೆ. ಸಂಕ್ರಾಂತಿಯ ನಂತರ ಚಳಿಗಾಲ ಕೊಂಚ ಕೊಂಚವೇ ಕಡಿಮೆಯಾಗುತ್ತದೆ. ಮಕರ ಸಂಕ್ರಾಂತಿ ಎಂದರೆ ಸುಗ್ಗಿಕಾಲವೂ ಹೌದು. ವರ್ಷವೆಲ್ಲ ಬೆವರು ಸುರಿಸಿ ಬೆಳೆದ ಫಸಲು ರೈತನ ಕೈಗೆಟಕುವ ಸಮಯ ಇದು.
ಕಾಮಧೇನು ಎಂದು ಕರೆಯಲ್ಪಡುವ ರಾಸುಗಳಿಗೆ ಸಂಕ್ರಾಂತಿಯಂದು ವಿಶೇಷ ಗೌರವ. ಅವಿರತ ಕೆಲಸ ಮಾಡಿ ದಣಿದಿದ್ದ ರೈತರಿಗೂ, ಊಳಿ ಸುಸ್ತಾದ ರಾಸುಗಳಿಗೂ ಕೆಲಹೊತ್ತು ಮನಸ್ಸನ್ನು ಸಂಭ್ರಮದಲ್ಲಿ ಕಳೆಯುವುದಕ್ಕಾಗಿ ವಿವಿಧ ಸ್ಪರ್ಧೆಗಳು, ಮನರಂಜನೀಯ ಕಾರ್ಯಕ್ರಮಗಳೂ ನಡೆಯುತ್ತವೇ ಆದರೇ ಈ ಬಾರಿ ದೇಶದ ಬೆನ್ನೆಲಬು ನಮ್ಮ ರೈತರು ಸಂಕ್ರಾಂತಿ ಆಚರಿಸದೆ ಕೊರೆವ ಚಳಿಯಲ್ಲಿ ದೆಹಲಿಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ. ಹೊಸ ಬದಲಾವಣೆಯ ನಿರೀಕ್ಷೆಯಲ್ಲಿ ನಮ್ಮ ರೈತರು…
ಸಂಕ್ರಾಂತಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಜಗದ ಅಧಿನಾಯಕ ಸೂರ್ಯ ತನ್ನ ಪಥ ಬದಲಿಸುವ ಪರ್ವಕಾಲವನ್ನೇ ನಾವು ಸಂಕ್ರಾಂತಿ ಎಂದು ಕರೆಯುತ್ತೇವೆ.
12 ಸೌರಮಾನ ಮಾಸಗಳಾದ ಮೇಷ ದಿಂದ ಹಿಡಿದು, ಮೀನದವರೆಗೂ ಸೂರ್ಯ ತನ್ನ ಪಥ ಬದಲಿಸುತ್ತಾನಾದರೂ ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸುವ ಪರ್ವಕಾಲವನ್ನು ಮಕರಸಂಕ್ರಾಂತಿಯೆಂದು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಮಕರ ಸಂಕ್ರಾಂತಿಯಿಂದ ಉತ್ತರಾಯಣದ ಪುಣ್ಯಕಾಲ ಆರಂಭವಾಗುತ್ತದೆ. ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ಇಚ್ಛಾಮರಣಿ ಭೀಷ್ಮ ಬಾಣದ ಹಾಸಿಗೆಯ ಮೇಲೆ ಮಲಗಿ, ಇದೇ ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದ ಎಂಬುದನ್ನು ನಾವೆಲ್ಲ ತಿಳಿದಿದ್ದೇವೆ. ಉತ್ತರಾಯಣದಲ್ಲಿ ಮರಣಿಸಿದರೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಂತೆ. ದೆಹಲಿಯ ಹೋರಾಟದಲ್ಲಿ ಮಡಿದ ವೀರ ರೈತರಿಗೆ ಸ್ವರ್ಗ ವ್ಯಾಪ್ತಿಯಾಗುತ್ತದೆ ,ಹೊಆರಾಟದಲ್ಲಿ ನಿರತರಾಗಿರುವ ನಮ್ಮ ರೈತರಿಗೆ ರೈತ ಸಂಕ್ರಾಂತಿ ಹಬ್ಬದ ಶುಭಾಶಯಗಳು.