ಯಾದಗಿರಿ: ಹಾಡಹಗಲೆ ಯುವಕನ ಬರ್ಬರ ಹತ್ಯೆ: ಮತ್ತೊಬ್ಬನ ಅಪಹರಣ

0
100

ಸುರಪುರ: ಹುಣಸಗಿ ಪಟ್ಟಣದಲ್ಲಿ ಹಾಡಹಗಲೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಹುಣಸಗಿ ಪಟ್ಟಣದ ಬಸ್ ನಿಲ್ದಾಣ ಬಳಿಯಲ್ಲಿನ ಧನಲಕ್ಷ್ಮೀ ಜ್ಯೂವೆಲರ‍್ಸ್ ಮಾಲೀಕರಾದ ಜಗದೀಶ ಶಿರವಿ ಎಂಬುವವರ ಮಗ ನರೇಂದ್ರ ಶಿರವಿ (೨೨ ವರ್ಷ) ಎಂಬುವನನ್ನು ಮನೆಯಲ್ಲಿಯೆ ಕೊಚ್ಚಿ ಕೊಲೆ ಮಾಡಲಾಗಿದೆ.ಅಲ್ಲದೆ ಜಗದೀಶ ಶಿರವಿಯ ಧನಲಕ್ಷ್ಮೀ ಜ್ಯೂವೆಲರ‍್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಎಂಬ ಯುವಕನನ್ನು ಅಪಹರಣ ಮಾಡಲಾಗಿದೆ ಹೇಳಲಾಗುತ್ತಿದೆ.

Contact Your\'s Advertisement; 9902492681

ಕೊಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ,ಆದರೆ ಹತ್ಯೆಗೊಳಗಾದ ಯುವಕ ನರೇಂದ್ರ ಶಿರವಿ ಕೊಲೆಯ ನಂತರ ಮನೆಯಲ್ಲಿದ್ದ ೫ ತೊಲ ಬಂಗಾರ ಮತ್ತು ೨ ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಕೊಲೆಯ ಹಿಂದಿನ ಕಾರಣ ಹಾಗು ಹಣ ಮತ್ತು ಬಂಗಾರ ತೆಗೆದುಕೊಂಡು ಹೋದ ಬಗ್ಗೆ ನಿಖರವಾಗಿ ತಿಳಿದುಬಂದಿಲ್ಲವಾದರು,ಕೊಲೆಯ ಕಾರಣ ಪೊಲೀಸರ ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ.ಘಟನಾ ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here