ಸುರಪುರ: ತಾಲೂಕಿನ ಮಂಗಳೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬಲಭೀಮೇಶ್ವರ ಕಾರ್ತಿಕೋತ್ಸವ ಆಚರಿಸಲಾಯಿತು.ಎಳ್ಳು ಅಮವಾಸ್ಯೆಯಂದು ನಡೆಯುವ ಕಾರ್ತಿಕೋತ್ಸವ ಹಾಗು ಗ್ರಾಮದ ಪಾದಗಟ್ಟೆಯಿಂದ ದೇವರ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.
ಸಂಜೆ ಪಂಡೀತ ನರಸಿಂಹಚಾರ್ಯ ಅವರ ವೈದಿಕ ಪೂಜೆಯಿಂದಿಗೆ ನಂದಪ್ಪ ಪೂಜಾರಿಯವರ ನೇತೃತ್ವದಲ್ಲಿ ಹೂವಿನಿಂದ ಅಲಂಕಾರಗೊಳಿಸಲಾಗಿದ್ದ ಬಲಭೀಮೇಶ್ವರ ರಥೋತ್ಸವವನ್ನು ಕೂಡ ನಡೆಸಲಾಯಿತು ನಂತರ ದೇವರ ಗುಹಾ ಪ್ರವೇಶವು ನಡೆಯಿತು.ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಹಾಗು ಮುಖಂಡರು ಸೇರಿದಂತೆ ಮಂಗಳೂರು ಮತ್ತು ಕನ್ನೆಳ್ಳಿ ಪೇಠ ಅಮ್ಮಾಪುರ ಹಾಳ ಅಮ್ಮಾಪುರ ಬಸವ ಕ್ಯಾಂಪ್ ಸೇರಿ ಸಾವಿರಾರು ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ವರ್ಷ ಕೊರೊನಾ ಭೀತಿಯಿಂದ ಕಾರ್ತಿಕೋತ್ಸವ ಸರಳವಾಗಿ ಆಚರಣೆ ಮಾಡಲಾಗಿದೆ,ಅಲ್ಲದೆ ಕೋವಿಡ್ ನಿಯಮಗಳನ್ನು ಪಾಲಿಸಲಾಗಿದೆ ಎಂದು ಮುಖಂಡ ಭೀಮರಾಯ ಮಾಸ್ಟರ್ ತಿಳಿಸಿದ್ದಾರೆ.