ಸುರಪುರ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಮುಂದುವರೆದಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಹಬ್ಬ ಜಾತ್ರೆ ಉತ್ಸವ ಸರಳವಾಗಿ ನಡೆಸುವಂತೆ ಕರೆ ನೀಡಲಾಗಿದೆ.
ಅಲ್ಲದೆ ಈಬಾರಿ ತಿಂಥಣಿ ಮತ್ತಿತರೆಡೆ ಜನರು ಸೇರುವ ಸಂಕ್ರಾಂತಿ ಪುಣ್ಯ ಸ್ನಾನವನ್ನು ನಿಷೇಧಿಸಿ ಜಿಲ್ಲಾಡಳಿತ ಹಾಗು ಸುರಪುರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು ಪ್ರಕಟಣೆಯನ್ನು ಹೊರಡಿಸಿದ್ದರು.
ಆದರೆ ಸಂಕ್ರಾಂತಿಯ ಪುಣ್ಯ ಸ್ನಾನದ ಬಗ್ಗೆ ಅಪಾರವಾದ ನಂಬಿಕೆಯುಳ್ಳ ಜನರು ಇಂದು ತಿಂಥಣಿಯ ಕೃಷ್ಣಾ ನದಿಯಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಜೊತೆಗೆ ದೇವಸ್ಥಾನದಲ್ಲಿ ದೇವರ ದರುಶನವನ್ನು ಪಡೆದರು.