ಶಹಾಬಾದ:ನಗರದ ಗಂಗಮ್ಮ.ಎಸ್. ಮರಗೋಳ ಕನ್ಯಾ ಪ್ರೌಢಶಾಲೆಯಲ್ಲಿ ಶುಕ್ರವಾರ ಕಲಬುರಗಿ ಜಿಲ್ಲಾಧಿಕಾರಿ ವಿಜಯ ಜೋತ್ಸನಾ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿಯನ್ನು ಚುನಾವಣೆ ಆಯೋಗದ ಆದೇಶದಂತೆ ಎನ್‌ಐಸಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದಿಂದ ನಿಗದಿಪಡಿಸಲಾಯಿತು.
ಈ ವೇಳೆ ಭಂಕೂರ ಗ್ರಾಪಂ ಅಧ್ಯಕ್ಷ ಸ್ಥಾನ- ಸಾಮನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ- ಪರಿಶಿಷ್ಟ ಜಾತಿ,
ತೊನಸನಹಳ್ಳಿ(ಎಸ್) ಗ್ರಾಪಂ ಅಧ್ಯಕ್ಷ ಸ್ಥಾನ- ಸಾಮನ್ಯ , ಉಪಾಧ್ಯಕ್ಷ ಸ್ಥಾನ- ಪರಿಶಿಷ್ಟ ಜಾತಿ ಮಹಿಳೆ, ಮರತೂರ ಗ್ರಾಪಂ ಅಧ್ಯಕ್ಷ ಸ್ಥಾನ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ- ಸಾಮನ್ಯ ಮಹಿಳೆ, ಹೊನಗುಂಟಾ ಗ್ರಾಪಂ ಅಧ್ಯಕ್ಷ ಸ್ಥಾನ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ- ಸಾಮನ್ಯ ಮೀಸಲಾತಿ ನಿಗದಿಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿ ಜಿಲ್ಲಾಧಿಕಾರಿ ವಿಜಯ ಜೋತ್ಸನಾ, ಜನರ ಸೇವೆ ಮಾಡಲು ತಮಗೆಲ್ಲರಿಗೂ ಇದೊಂದು ಸದಾವಕಾಶ ಒದಗಿ ಬಂದಿದೆ. ಆನರ ವಿಶ್ವಾಸಕ್ಕೆ ಮೀರಿ ಗ್ರಾಮದ ಅಭಿವೃದ್ಧಿಪಡಿಸುವುದು ತಮ್ಮೆಲ್ಲರ ಕರ್ತವ್ಯ. ತಾವು ಮಾಡಿದ ಅಭಿವೃದ್ಧಿ ಕಾರ್ಯಗಳೇ ಮುಂದಿನ ರಾಜಕೀಯ ಭವಿಷ್ಯ ಅಡಗಿದೆ. ಒಳ್ಳೆಯ ಕಾರ್ಯಗಳು ಮನುಷ್ಯನನ್ನು ಬಹು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ.ಅದೇ ರೀತಿ ತಾವು ಜನಪರವಾದ ಗ್ರಾಮದ ಅಭಿವೃದ್ಧಿ ಮಾಡುವ ಮೂಲಕ ಗ್ರಾಪಯಿಂದ ತಾಪಂ, ಜಿಪಂ ಹೀಗೆ ಒದೊಂದು ಎತ್ತರಕ್ಕೆ ಬೆಳೆಯುವ ವ್ಯಕ್ತಿಗಳಾಗಿ.ಆದರೆ ಗ್ರಾಮದ ಅಭಿವೃದ್ಧಿ ಹಾಗೂ ಜನರ ಸೇವಕರಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಐಎಎಸ್ ಅಧಿಕಾರಿ ಡಾ.ಆಕಾಶ ಶಂಕರ, ಸೇಡಂ ಎಸಿ ರಮೇಶ ಕೋಲಾರ, ತಹಸೀಲ್ದಾರ್ ಸುರೇಶ್ ವರ್ಮಾ, ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಗಂಗಮ್ಮ ಶಾಲೆಯ ಕಾರ್ಯದರ್ಶಿ ಭೀಮಾಶಂಕರ ಮುಟ್ಟತ್ತಿ, ತಾಲೂಕಿನ ಭಂಕೂರ, ಮರತೂರ, ಹೊನಗುಂಟಾ, ತೊನಸನಹಳ್ಳಿ(ಎಸ್) ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾದ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.