ಸುರಪುರ: ತಾಲೂಕಿನ ಮಂಗಳೂರು ಗ್ರಾಮದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಮಹಾನಾಯಕ ಧಾರವಾಹಿ ಬೆಂಬಲಿಸಿ ಬ್ಯಾನರ್ ಅನಾವರಣ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಾವರಣಗೊಳಿಸಿದ ಮುಖಂಡ ವೆಂಕೋಬ ಯಾದವ್ ಅವರು ಮಾತನಾಡಿ, ಡಾ:ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಜಾತಿ ಮತಕ್ಕೆ ಸೀಮಿತವಾದವರಲ್ಲ,ಅವರು ದೇಶದ ಪ್ರತಿಯೊಬ್ಬರ ಏಳಿಗೆ ಹಾಗು ದೇಶದ ಸಮಗ್ರತೆಗಾಗಿ ಸಂವೀಧಾನವನ್ನು ರಚಿಸಿ ಕೊಟ್ಟಿದ್ದಾರೆ.ಅಲ್ಲದೆ ದೇಶದಲ್ಲಿ ಹಿಂದುಳಿದ ಹಾಗು ತುಳಿತಕ್ಕೊಳಗಾದ ಎಲ್ಲರು ದಲಿತರೆ ಆಗಿದ್ದಾರೆ,ಅವರೆಲ್ಲರ ಏಳಿಗೆಗಾಗಿ ಸಂವೀಧಾನವನ್ನು ರಚಿಸಿದ್ದಾರೆ.ಅಂತಹ ಮಹಾನ್ ವ್ಯಕ್ತಿಯ ಧಾರವಾಹಿ ಬೆಂಬಲಿಸಿ ಬ್ಯಾನರ್ ಅನಾವರಣಗೊಳಿಸುವ ಅವಕಾಶ ನನಗೆ ಲಭಿಸಿದ್ದು ನನ್ನ ಭಾಗ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಎಲ್ಲರ ಮಾದರಿ ವ್ಯಕ್ತಿಯಾಗಿದ್ದಾರೆ,ಎಲ್ಲ ಪೋಷಕರು ಈ ಧಾರವಾಹಿಯನ್ನು ನೋಡುವ ಮೂಲಕ ಮಕ್ಕಳಲ್ಲಿಯೂ ಅಂಬೇಡ್ಕರರಂತೆ ಬುದ್ಧಿ ಮತ್ತು ಜನಪರವಾದ ಕಾಳಜಿಯನ್ನು ಬೆಳೆಸುವಂತೆ ಆಶಿಸಿದರು.
ಅಂಬೇಡ್ಕರರು ದೇಶದಲ್ಲಿನ ಎಲ್ಲಾ ದೀನ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರರಿಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಮತ್ತು ರಾಜಕೀಯ ಸೌಲಭ್ಯವನ್ನು ನೀಡುವ ಮೂಲಕ ದೇಶದ ಅಭೀವೃಧ್ಧಿಗೆ ದಾರಿ ದೀಪವಾಗಿದ್ದಾರೆ.ಅಂತಹ ಮಹಾನಾಯಕನ ಬ್ಯಾನರ್ ಅನಾವರಣಗೊಳಿಸುವ ಮೂಲಕ ಅಂಬೇಡ್ಕರರ ಸ್ಮರಣೆಗೆ ಮುಂದಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡ ಬಾಲಯ್ಯ ಶರಣ ಹಾಗು ಹೋರಾಟಗಾರ ಎಂ.ಪಟೇಲ್ ಮಾತನಾಡಿದರು.ಕಾರ್ಯಕ್ರಮದ ಆರಂಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಕ್ಯಾಂಡಲ್ ಬೆಳಗಿಸಿ ನಮಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡ ಶೇಖಪ್ಪ ಬಡಿಗೇರ,ವೀರಭದ್ರಪ್ಪ ತಳವಾರಗೇರಾ ಅರ್ಷದ್ ದಖನಿ ಭೀಮರಾಯ ಮಾಸ್ಟರ್ ಭೀಮು ಯಾದವ್ ಸೇರಿದಂತೆ ಅನೇಕರಿದ್ದರು.