ಮಹಿಳಾ ಕಾಯಕೋತ್ಸವ ಶಕ್ತಿ ಅಭಿಯಾನಕ್ಕೆ ಚಾಲನೆ

0
54

ಕಲಬುರಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ಸಕ್ರೀಯವಾಗಿ ಭಾಗವಹಿಸಿ ಉದ್ಯೋಗ ಪಡೆಯಲು ಉತ್ತೇಜಿಸುವ ಮಹಿಳಾ ಕಾಯಕೋತ್ಸವ ಶಕ್ತಿ ಅಭಿಯಾನಕ್ಕೆ ಶುಕ್ರವಾರ ಅಫಜಲಪೂರ ತಾಲೂಕಿನ ಘತ್ತರಗಾ ಮತ್ತು ಕಲ್ಲೂರ ಗ್ರಾಮದಲ್ಲಿ ಚಾಲನೆ ನೀಡಲಾಯಿತು.

ಅಫಜಲಪುರ ತಾಲೂಕು ಪಂಚಾಯತಿಯ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಅವರು ಮಹಿಳಾ ಕಾಯಕೋತ್ಸವ ಶಕ್ತಿ ಅಭಿಯಾನ ಮತ್ತು ಮಹಿಳಾ ಕೂಲಿಕಾರ್ಮಿಕರ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ರಮೇಶ ಪಾಟೀಲ ಅವರು ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸಲು ಉತ್ತೇಜನ ನೀಡಲು ಈ ಮಹಿಳಾ ಕಾಯಕೋತ್ಸವ ಹಮ್ಮಿಕೊಳಲಾಗಿದೆ. ನರೇಗಾ ಯೋಜನೆಯಡಿ ಗಂಡು-ಹೆಣ್ಣಿಗೆ ಸಮಾನವಾಗಿ ದಿನಕ್ಕೆ 275 ರೂ. ಗಳಂತೆ ವಾರ್ಷಿಕವಾಗಿ 100 ದಿನ ಉದ್ಯೋಗ ನೀಡಲಾಗುತ್ತದೆ. ಮಹಿಳಾ ಕೂಲಿ ಕಾರ್ಮಿಕರು ಕೆಲಸಕ್ಕೆ ಬಂದಲ್ಲಿ ಅವರ ಮಕ್ಕಳ ಅರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೆಲಸದ ಸ್ಥಳದಲ್ಲಿ ಶುಧ್ಧ ಕುಡಿಯುವ ನೀರು ಸಹ ಪೂರೈಸಲಾಗುತ್ತದೆ ಎಂದು ಮಹಿಳಾ ಕಾಯಕೋತ್ಸವದ ಉದ್ದೇಶವನ್ನು ವಿವರಿಸಿದರು.

ಕಾಯಕೋತ್ಸವದ ತರಬೇತಿ ಕಾರ್ಯಕ್ರಮದಲ್ಲಿ ಘತ್ತರಗಾ, ಕಲ್ಲೂರ ಗ್ರಾಮ ಪಂಚಾಯತಿಯ ಪಿ.ಡಿ.ಓ.ಗಳು, ಕಾರ್ಯದರ್ಶಿಹಳು, ನರೇಗಾ ಯೋಜನೆಯ ಡಿ.ಇ.ಓ., ಐ.ಇ.ಸಿ. ಸಂಯೋಜಕರು, ಮುಖಂಡರಾದ ಅಪ್ಪಾರಾವ ಚಾಂದಕೋಟೆ, ಇರ್ಫಾನ್ ಜಾಗಿರದಾರ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಕಾಯಕ ಬಂಧುಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here