ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ

0
26

ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಇಂದು ಆರೋಗ್ಯವಂತ ಶಿಶುವಿನ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಈ ಸುಂದರ ಕಾರ್ಯಕ್ರಮಕ್ಕೆ ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ, ಮುನಿರಾಜು, ಅಮರಾವತಿ, ಗಾಯತ್ರಿ ಇವರು ಜ್ಯೋತಿ ಬೆಳಗುವ ಮುಖಾಂತರ ಚಾಲನೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಉಪಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ಗೀತಾ ರವರು ಈ ಒಂದು ಸಮಯದಲ್ಲಿ ತಿಂಗಳಿನಿಂದ 1ವರ್ಷದ ಮಕ್ಕಳನ್ನು ಪರಿಗಣಿಸಿ ಆರೋಗ್ಯವಂತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದರ ಜೊತೆಗೆ ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಗರ್ಭಿಣಿ ಆರೈಕೆ ,ಆಸ್ಪತ್ರೆಯ ಹೆರಿಗೆ, ನವಜಾತ ಶಿಶುವಿನ ಆರೈಕೆ, ಎದೆಹಾಲಿನ ಮಹತ್ವ, ಬಾಣಂತಿ ಆರೈಕೆ , ಲಸಿಕಾ ಕಾರ್ಯಕ್ರಮ, ಪೌಷ್ಠಿಕ ಆಹಾರ, ಕುಟುಂಬಕಲ್ಯಾಣ ಪದ್ದತಿಗಳು, ಹೆಣ್ಣುಮಗುವಿನ ಮಹತ್ವ, ಕುಷ್ಟರೋಗ ಮಾಸಾಚಾರಣೆ ಈ ಸಂಜೀವಿನಿ ಓಪಿಡಿ ಮುಂತಾದ ವಿಷಯಗಳ ಬಗ್ಗೆ ತಾಯಂದಿರಿಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಉಪಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ ಗೀತಾ. ಗ್ರಾಮ ಪಂಚಾಯ್ತಿ ಸದಸ್ಯರಾದ ಕೆಇಬಿ ಚಂದ್ರು. ಮೂನಿರಾಜು. ಲೋಕೇಶ್. ಅಮರಾವತಿ. ಗಾಯಿತ್ರಿ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ವಿಮಲಮ್ಮ. ಆಶಾ ಕಾರ್ಯಕರ್ತೆ ಯಲ್ಲಮ್ಮ. ಅಂಗನವಾಡಿ ಕಾರ್ಯಕರ್ತೆ ಮುನಿರತ್ನಮ್ಮ. ಅಂಗನವಾಡಿ ಸಹಾಯಕಿ ಶೇಷಮ್ಮ. ಬಾಣಂತಿಯರು ಹಾಗೂ ಅಂಗನವಾಡಿ ಮಕ್ಕಳು ಹಾಜರಿದ್ದರು.

ವರದಿ :- ಅವಿನಾಶ್. ಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here