ಸುರಪುರ: ಕಾರ್ಮಿಕರ ಏಳಿಗೆಗೆ ಸರಕಾರ ಅನೇಕ ಯೋಜನೆಗಳನ್ನು ನೀಡಿದೆ ಎಲ್ಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೌಲಭ್ಯಗಳನ್ನು ಪಡೆದಕೊಳ್ಳಬೇಕು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಸಲಹೆ ನೀಡಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಇಲಾಖೆಯ ನೆರವಿನಿಂದ ನೀಡಲಾಗುವ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿ,ಈ ಕಿಟ್‌ಗಳನ್ನು ಅನೇಕ ದಿನಗಳ ಹಿಂದೆಯೆ ಕೊಡಬೇಕಾಗಿತ್ತು,ಆದರೆ ಮದ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಸ್ವಲ್ಪ ತಡವಾಗಿದೆ,ಎಲ್ಲ ಕಾರ್ಮಿಕರು ಕಿಟ್‌ಗಳನ್ನು ಪಡೆಯುವ ಜೊತೆಗೆ ಸರಕಾರದ ಎಲ್ಲಾ ಸೌಲಭ್ಯಗಳ ಲಾಭ ಪಡೆಯುವಂತೆ ಹಾಗು ಇನ್ನು ಅನೇಕ ಜನ ಕಾರ್ಮಿಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಲ್ಲ ಎಲ್ಲರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಸೌಲಭ್ಯಗಳನ್ನು ಪಡೆಯುವಂತೆ ಕರೆ ನೀಡಿದರು.
ಕಾರ್ಮಿಕ ಇಲಾಖೆಯ ಯಾದಗಿರಿ ಜಿಲ್ಲಾ ಅಧಿಕಾರಿ ಶ್ವೇತಾ ಮಾತನಾಡಿ,ತಾಲೂಕಿನಾದ್ಯಂತ ೩ ಸಾವಿರ ಜನ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಣೆ ಮಾಡಬೇಕಾಗಿದೆ,ಇಂದು ಸಾಂಕೇತಿಕವಾಗಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.ಅಲ್ಲದೆ ಗ್ರಾಮೀಣ ಭಾಗದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ತಾವೆಲ್ಲರು ತಿಳಿಸಿ ಕಾರ್ಮಿಕ ಇಲಾಖೆಯಿಂದ ನೊಂದಣಿ ಪಡೆಯಲು ಸಲಹೆ ನೀಡುವಂತೆ ತಿಳಿಸಿದರು.
ನಂತರ ನೂರಕ್ಕೂ ಹೆಚ್ಚು ಜನ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ನಿರೀಕ್ಷಕ ಗಂಗಾಧರ ಸುರಪುರ ಕಾರ್ಮಿಕ ನಿರೀಕ್ಷಕರಾದ ಸಬೀರಾ ಯಾದಗಿರಿ ಡಾಟಾ ಎಂಟ್ರಿ ಆಪರೇಟರ್ ಶಿವರುದ್ರ ಸಯ್ಯದ್ ಮುದಾಫೀರ್ ಮುಖಂಡರಾದ ಮೇಲಪ್ಪ ಗುಳಗಿ ಅಮರಣ್ಣ ಹುಡೇದ್ ಭೀಮಾಶಂಕರ ಬಿಲ್ಲವ್ ಹಾಗು ಕಾರ್ಮಿಕ ಬಂಧುಗಳಾದ ಬಸವರಾಜ ಪೂಜಾರಿ ರಾಜು ಕಲಾಲ ರಮೇಶ ಕಲ್ಲೂರ್ ಶಾಂತಗೌಡ ನಾಗರಾಳ ಸೇರಿದಂತೆ ಅನೇಕ ಜನ ಕಾರ್ಮಿಕರಿದ್ದರು.