ಗೋಳಾ(ಕೆ) ಗ್ರಾಮದಲ್ಲಿ ನಗರಸಭೆಗೆ ಸಂಬಂಧಿಸಿದ ಮನೆ ಬೇರೆಯವರು ಒತ್ತುವರಿ ಮಾಡಿಕೊಂಡಿದನ್ನು ಖಾಲಿ ಮಾಡಿಸಲು ಒತ್ತಾಯ

0
126

ಶಹಾಬಾದ:ನಗರದ ನಗರಸಭೆಯ ಸಭಾಂಗಣದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷತೆ ಯಲ್ಲಿ ಸರ್ವ ಸದಸ್ಯರ ವಿಶೇಷ ಸಾಧಾರಣ ಸಾಮನ್ಯ ಸಭೆ ನಡೆಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡಲು ನನ್ನ ವಾರ್ಡ-ನನ್ನ ರಸ್ತೆ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಈ ಅಭಿಯಾನಕ್ಕೆ ಸರ್ವಸದಸ್ಯರು ಒಪ್ಪಿಗೆ ನೀಡುವುದರೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಅದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಸೂಚಿಸಿದರು. ನಗರಸಭೆಯ ಸದಸ್ಯ ರವಿ ರಾಠೋಡ ಮಾತನಾಡಿ, ಒಳ್ಳೆಯ ಕೆಲಸಕ್ಕೆ ನಮ್ಮೆಲ್ಲರ ಬೆಂಬಲ ಯಾವತ್ತಿಗೂ ಇದೆ.ಆದರೆ ಈ ಅಭಿಯಾನ ನಾಮಕೇ ವಾಸ್ತೆ ಆಗಬಾರದೆಂದು ತಿಳಿಸಿದರು.ಅಲ್ಲದೇ ಗೋಳಾ(ಕೆ) ಗ್ರಾಮದಲ್ಲಿ ನಗರಸಭೆಗೆ ಸಂಬಂಧಿಸಿದ ಮನೆಯಲ್ಲಿ ಸುಮಾರು ಹತ್ತು ವರ್ಷದಿಂದ ಬೇರೆಯವರು ಒತ್ತುವರಿ ಮಾಡಿಕೊಂಡು ಮನೆಯಲ್ಲಿದ್ದಾರೆ.ಒತ್ತುವರಿ ಮಾಡಿಕೊಂಡಿರುವವರನ್ನು ತಕ್ಷಣವೇ ಖಾಲಿ ಮಾಡಿಸಿ.ಅಲ್ಲದೇ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಪಾನಿ ಪುರಿ ಅಂಗಡಿ, ಇತರ ಡಬ್ಬಾ ಅಂಗಡಿಗಳು ಯಾವುದೇ ಅನುಮತಿಯಿಲ್ಲದೇ ಸ್ಥಳವನ್ನು ಒತ್ತುವರಿ ಮಾಡಿದ್ದಾರೆ.ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್ ಮಾತನಾಡಿ, ನಗರವನ್ನು ಕಸ ಮುಕ್ತ ಮಾಡುತ್ತೆವೆ ಎಂದು ಹೇಳುತ್ತಿದ್ದೀರಿ.ಈ ಹಿಂದೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಹೇಳಿದ್ದು ನಾವು ಕೇಳಿದ್ದೆವೆ.ಆದರೆ ಇಂದಿಗೂ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ. ಪ್ಲಾಸ್ಟಿಕ್ ಮಾರಾಟವೂ ನಿಂತಿಲ್ಲ.ಇದರಿಂದ ನಗರದ ಚರಂಡಿಗಳಲ್ಲಿ ಪ್ಲಾಸ್ಟಿಕ್ ಸೇರಿಕೊಂಡು ತೊಂದರೆಯಾಗುತ್ತಿದೆ.ಅಲ್ಲದೇ ತ್ಯಾಜ್ಯವಿಲೇವಾರಿ ಘಟಕಕ್ಕೆ ಈಗಾಗಲೇ ಕೋಟಿಗಟ್ಟಲೇ ಹಣ ಅನುದಾನವನ್ನು ಬಳಸಲಾಗಿದೆ.ಆದರೆ ಇಲ್ಲಿಯವರೆಗೆ ಒಂದು ನಯಾ ಪೈಸೆ ಅದರಿಂದ ಏನಾದರೂ ಲಾಭ ನಗರಸಭೆಯಗೆ ಬಂದಿದೆಯಾ ? ಅಲ್ಲಿನ ಗೊಬ್ಬರ ಒಬ್ಬ ರೈತರಿಗಾದರೂ ನೀಡಿದೀರಾ ಎಂದು ಪ್ರಶ್ನಿಸಿದರು. ಎಡಿಬಿ ಯವರ ಶುದ್ಧ ಕುಡಿಯುವ ನೀರಿನ ಕರ ೧೨ ಲಕ್ಷ ನಗರಸಭೆಗೆ ಸಂದಾಯವಾಗಬೇಕು.ಆದರೆ ಕೇವಲ ಎರಡರಿಂದ ಮೂರು ಲಕ್ಷ ಮಾತ್ರ ಸಂದಾಯವಾಗುತ್ತಿದೆ.ತೆರಿಗೆ ಸಂಗ್ರಹವಾಗದಿದ್ದರೇ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಗುಡುಗಿದರು.

ಕೋವಿಡ್-೧೯ ಇರುವುದರಿಂದ ಎಲ್ಲಾ ಕೆಲಸಗಳು ಸ್ಥಗಿತಗೊಂಡಿದ್ದವು.ಈಗಾಗಲೇ ಘಟಕದಲ್ಲಿ ವಿಂಗಡಿಸಲಾದ ಪ್ಲಾಸ್ಟಿಕ್, ಗಾಜಿನ ಚೂರು ಹಾಗೂ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿದೆ. ಸದಸ್ಯರು ೨೫ ಕೆಜಿ ಚೀಲಕ್ಕೆ ಒಂದು ದರ ನಿಗದಿ ಮಾಡಿದರೇ ರೈತರಿಗೆ ನೀಡಲು ಅನುಕೂಲವಾಗುತ್ತದೆ ಎಂದು ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಉತ್ತರಿಸಿದರು.

ನಗರಸಭೆಯ ಸದಸ್ಯ ಶರಣು ವಸ್ತçದ್ ಮಾತನಾಡಿ,ನಗರದೊಳಗೆ ಬರುತ್ತಿದ್ದಂತೆ ಅವೈಜ್ಞಾನಿಕ ಹಂಪ್‌ಗಳ ನಿರ್ಮಾಣವಾಗಿವೆ.ಅದರಿಂದ ಅಪಘಾತಗಳು ಸಂಭವಿಸುತ್ತಿವೆ.ಅದನ್ನು ತೆಗೆದು ಹಾಕಿ.ಅಲ್ಲದೇ ನಗರದಲ್ಲಿ ಒಂದು ಮೂತ್ರಾಲಯವಿಲ್ಲದಿರುವುದು ನಾಚಿಕೆಯ ಸಂಗತಿ.ಅಲ್ಲದೇ ಬೀದಿ ನಾಯಿಗಳ ಹಾವಳಿ ಉಂಟಾಗುತ್ತಿದೆ ಮೊದಲು ನಿಯಂತ್ರಣ ಮಾಡಿ ಎಂದರು.
ನಗರಸಭೆಯ ಸದಸ್ಯೆ ಸಾಬೇರಾಬೇಗಂ ಮಾತನಾಡಿ,ಮುಳ್ಳು ಕಂಟಿಗಳಲ್ಲಿ ಹಳೆಯದಾದ ಶೌಚಾಲಯವಿದ್ದು, ಅದನ್ನು ಕೆಡವಿ ಹೊಸದಾದ ಶೌಚಾಲಯ ನಿರ್ಮಾಣ ಮಾಡಲು ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ.ಅಲ್ಲದೇ ಜೆಇ ಬಸವರಾಜ ಅವರು ಕೆಲಸ ಮಾಡದೇ ಸುಳ್ಳು ಹೇಳೋ ಚಾಳಿ ಬೆಳೆಸಿಕೊಂಡಿದ್ದಾರೆ ಎಂದು ದೂರು ನೀಡಿದರು.
ನಗರಸಭೆಯ ಸದಸ್ಯರಾದ ಸೂರ್ಯಕಾಂತ ಕೋಬಾಳ ಹಾಗೂ ಮಲ್ಲಿಕಾರ್ಜುನ ವಾಲಿ ಮಾತನಾಡಿ, ಎಡಿಬಿಯವರು ಕುಡಿಯುವ ನೀರಿನ ಬಿಲ್ ೫೪ ರೂ. ಬದಲಿಗೆ ೭ ರಿಂದ೧೦ ಸಾವಿರ ರೂ.ತಪ್ಪಾಗಿ ನಮೂದಾಗಿದೆ.ಆದ್ದರಿಂದ ಸರಿಯಾಗಿ ಕ್ರಮಕೈಗೊಳ್ಳುವಂತೆ ಪೌರಾಯುಕ್ತರಿಗೆ ಆಗ್ರಹಿಸಿದರು.

ನಾಗರಾಜ ಕರಣಿಕ್ ಮಾತನಾಡಿ, ವಾರ್ಡ ನಂ.೧೯ರಲ್ಲಿ ಅಲ್ಲಲ್ಲಿ ‌ಸ್ಲ್ಯಾಬಗಳು ಒಡೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಆದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ನಗರಸಭೆ ಕಸ ಹೊರುವ ಆಟೋಗಳ ಎಲ್ಲಾ ಬ್ಯಾಟರಿ ಕಳ್ಳತನ ಹೇಗಾಯಿತು.ಅದಕ್ಕೆ ಹೊಣೆ ಯಾರು ಎಂದು ಕೇಳಿದರು. ಅದಕ್ಕೆ ಪೌರಾಯುಕ್ತರು ಕೂಡಲೇ ಕ್ರಮಕೈಗೊಳ್ಳಲು ತಾಕೀತು ಮಾಡುತ್ತೆನೆ.ಅಲ್ಲದೇ ನಗರಸಭೆಯಲ್ಲಿ ಸಿಸಿ ಕ್ಯಾಮರಾ ಅಳವಾಡಿಸಲಾಗುತ್ತದೆ.ಅಲ್ಲದೇ ಮನೆಮನೆಗೆ ತೆರಳಿ ನಗರಸಭೆಯ ಪೌರಕಾರ್ಮಿಕರು ತೆರಳುವ ವ್ಯವಸ್ಥೆ ಮಾಡಿದ್ದು, ಹಸಿ ಕಸ ಹಾಗೂ ಒಣಕಸ ಬೇರ್ಪಡಿಸಲು ಸಾರ್ವಜನಿಕರ ಪ್ರತಿ ಮನೆಗೆ ಎರಡು ಕಸದ ಬುಟ್ಟಿ ನೀಡಬೇಕಾಗಿರುತ್ತದೆ ಅದಕ್ಕಾಗಿ ಸುಮಾರು ೨೦ ಸಾವಿರ ಬುಟ್ಟಿಗಳನ್ನು ತರಬೇಕಾಗಿರುತ್ತದೆ  ಎಂದು ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಎಂದಾಗ ಸರ್ವ ಸದಸ್ಯರು ಒಪ್ಪಿಗೆ ನೀಡಿದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ವ್ಯವಸ್ಥಾಪಕ ಶಂಕರ ಇಂಜನಗೇರಿ, ಎಇಇ ಪುರುಷೋತ್ತಮ, ಎಇ ಶಾಂತರೆಡ್ಡಿ ದಂಡಗುಲಕರ್, ಕಂದಾಯ ಅಧಿಕಾರಿ ಸುನೀಲಕುಮಾರ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಶರಣು, ರಾಜೇಶ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here