ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ರಾಷ್ಟ್ರೀಯ ಸ್ಮಾರಕವಾಗಲಿ

0
73

ಶಹಾಬಾದ:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಹಿಂದುವಿನ ಕನಸಾಗಿದ್ದು, ಇದೀಗ ಅದು ಸಾಕಾರಗೊಳ್ಳುತ್ತಿದೆ ಎಂದು ತೊನಸನಹಳ್ಳಿ(ಎಸ್) ಗ್ರಾಮದ ಕೊತ್ತಲಪ್ಪ ಶರಣರು ಹೇಳಿದರು.

ಅವರು ಶುಕ್ರವಾರ ನಗರದ ಜಗದಂಬಾ ಮಂದಿರದಲ್ಲಿ ಆಯೋಜಿಸಲಾದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಕಾರ್ಯ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಒಬ್ಬರಿಂದ ಆಯ್ತು ಎನ್ನುವುದರ ಬದಲು ದೇಶಾದಾದ್ಯಂತ ಜನರಿಂದ ರಾಮ ನಿರ್ಮಾಣವಾಗಿದೆ ಎನ್ನುವುದಕ್ಕೆ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡಲಾಗುತ್ತಿದೆ.ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ರಾಷ್ಟ್ರೀಯ ಸ್ಮಾರಕವಾಗಲಿ ಎಂದು ಹೇಳಿದರು.

ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹದ ನಗರ ಸಂಚಾಲಕ ಅರುಣ ಪಟ್ಟಣಕರ್ ಮಾತನಾಡಿ, ಸುಮಾರು ೨೦೦ ಅಡಿ ತಳಪಾಯ, ಮೂರು ಅಂತಸ್ತಿನ ಐದು ಗೋಪುರವುಳ್ಳ ೪೬ ಸಾವಿರ ಚದು ಅಡಿ ವಿಸೀರ್ಣದಲ್ಲಿ ಈ ರಾಮಮಂದಿರವು ವಿವಿಧ ಲೋಹಗಳಿಮದ ನಿರ್ಮಾಣಗೊಳ್ಳುತ್ತಿದೆ.ನಿಧಿ ಸಂಗ್ರಹ ಯೋಜನೆಯೂ ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂದು ಹೇಳಿದರು.

ಮುಖಂಡರಾದ ಶಿವಕುಮಾರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಚಂದ್ರಕಾಂತ ಗೊಬ್ಬೂರಕರ್ ವೇದಿಕೆಯ ಮೇಲಿದ್ದರು. ಅಣ್ಣಪ್ಪ ದಸ್ತಾಪೂರ, ಚನ್ನಪ್ಪ ಕುಂಬಾರ, ಶರಣು ವಸ್ತ್ರದ, ಸದಾನಂದ ಕುಂಬಾರ,ಸಂಜಯ ಕೋರೆ, ದಿನೇಶ ಗೌಳಿ, ಅಶೋಕ ಜಿಂಗಾಡೆ, ಕನಕಪ್ಪ ದಂಡಗುಲಕರ್,ಸುಭಾಷ ಜಾಪೂರ, ಅಣವೀರ ಇಂಗಿನಶೆಟ್ಟಿ, ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ಜಯಶ್ರೀ ಸೂಡಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here