ಶ್ರೀ ಭೀಮೇಶ್ವರ ದೇವರ ಜೀವನ ಚರಿತ್ರೆ ವಿವಿಯ ಪ್ರಸಾರಾಂಗದಿಂದ ಪ್ರಕಟಿಸಲು ಮನವಿ

0
152

ಕಲಬುರಗಿ: ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ಅವತಾರಿ ಹಾಗೂ ಪವಾಡ ಪುರುಷ ಶ್ರೀ ಭೀಮೇಶ್ವರ ದೇವರು ಕ್ರಿ.ಶ. ೧೮೫೦ ಅಂದರೆ ಸುಮಾರು ೧೫೦ ವರ್ಷಗಳ ಹಿಂದೆ ಅನೇಕ ಅವತಾರ ತಾಳಿ ಪವಾಡಗಳನ್ನು ಸೃಷ್ಟಿ ಮಾಡಿ ಲಿಂಗೈಕ್ಯರಾದ ಶ್ರೀ ಭೀಮೇಶ್ವರರ ಜೀವನ ಚರಿತ್ರೆ ಕುರಿತು ಪುಸ್ತಕ (ಕೃತಿ) ತಮ್ಮ ವಿಶ್ವವಿದ್ಯಾಲಯ ಪ್ರಸಾರಾಂಗದ ಮೂಲಕ ಪ್ರಕಟಿಸುವಂತೆ ತೆಂಗಳಿ ಶ್ರೀ ಭೀಮೇಶ್ವರ ದೇವಸ್ಥಾನ ಟ್ರಸ್ಟ್ ಸದಸ್ಯರು ಆಗ್ರಹಿಸಿದ್ದಾರೆ.

ಟ್ರಸ್ಟ್ ಅಧ್ಯಕ್ಷ ವೀರೇಶ ವಾಲಿ, ಆಡಳಿತ ಮಂಡಳಿಯ ಸದಸ್ಯರಾದ ಶಿವರಾಜ ಅಂಡಗಿಯವರ ನೇತ್ರತ್ವದ ನಿಯೋಗ ಇಂದು ಗುಲಬರ್ಗಾ ವಿಶ್ವವಿಶ್ವವಿದ್ಯಾಲಯದ ಕುಲಪತಿಗಾಳಾದ ಚಂದ್ರಕಾಂತ ಯಾತನೂರ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Contact Your\'s Advertisement; 9902492681

ನಿಯೋಗದಲ್ಲಿ ಟ್ರಸ್ಟ್ ಸಮಿತಿಯ ಪದಾಧಿಕಾರಿ ಹಾಗೂ ಗ್ರಾಮದ ಮುಖಂಡರು ಒಳಗೊಂಡಂತೆ ಸೋಮಶೇಖರ ಪಟ್ಟೇದ, ಚಂದ್ರಶೇಖರ ಮಂಗದ, ಪಂಡಿತರಾವ ಬೇರನ, ಭೀಮರಾವ ಬಾರಿಗಿಡದ, ಶರಣಪ್ಪ, ಶಿವರಾಜ ಅಂಡಗಿ, ವೀರಭದ್ರಪ್ಪ ಚೇಂಗಟಿ, ವಿಶ್ವನಾಥ ಬಾಳದೆ, ಮಹೇಶ ಮಹಾಗಾಂವ, ಭೀಮಾಶಂಕರ ಅಂಕಲಗಿ, ಚಂದ್ರಶೇಖರ ಎಲೇರಿ, ಗುಂಡಪ್ಪ ಪಟ್ಟೇದ, ಶರಣಪ್ಪ ಸೇಡಂ, ಭೀಮರಾವ ಕುದರಿಕಾರ. ರೇವಪ್ಪ ಭೈರಿ, ಸಿದ್ದಣ್ಣ ಹೊಸಹಳ್ಳಿ, ಸಂಗಣ್ಣ ತೆಲಗಾಣಿ, ಬ್ರಹ್ಮಾನಂದ ಬುಳ್ಳಾ, ನಾಗು ಪಟ್ಟೇದ(ಸಂಧಿಮನಿ) ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here