ಕಲಬುರಗಿ: ಬೀದಿ ವ್ಯಾಪಾರಿ ಗಳ ಅನುಕೂಲಕ್ಕಾಗಿ ಸುಪ್ರೀಂ ಕೋರ್ಟಿನ ತೀರ್ಪು ನೀಡಿರುವಂತೆ ಕೇಂದ್ರ ಸರ್ಕಾರ ಸ್ಪಂದಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಗಳು ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿರುವಂತೆ ಯೋಜನೆಗಳು ಮಹಾನಗರ ಪಾಲಿಕೆ ವತಿಯಿಂದ ಸಮರೋಪಾದಿಯಲ್ಲಿ ಜಾರಿಯಾಗಬೇಕೆಂದು ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಸರ್ಕಾರಕ್ಕೆ ಒತ್ತಾಯಿಸಿರು.
ಇಂದು ರಾಷ್ಟೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಬೀದಿ ವ್ಯಾಪಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತ್ನಾಡಿದರು.
ಮುಂದುವರಿದು ಅವರು ಬೀದಿ ವ್ಯಾಪಾರಿ ಗಳಿಗೆ ಸರ್ಕಾರದ ಆದೇಶದಂತೆ ಬೀದಿ ವ್ಯಾಪಾರಿ ಗಳ ಸಮೀಕ್ಷೆ ಮಾಡಬೇಕು, ಗುರುತಿನ ಚೀಟಿ ,ಮಾರಾಟ ಪ್ರಮಾಣ ಪತ್ರ, ವ್ಯಾಪಾರಿಕ್ಕಾಗಿ ಸಾಲ ನೀಡಬೇಕು, ಬೀದಿ ವ್ಯಾಪಾರಿ ಗಳ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸೌಕರ್ಯಗಳು,ಬೀದಿ ಬದಿಯ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಸೇರಿದಂತೆ ಪ್ರಮುಖ ಬೇಡಿಕೆಗಳು ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಗನ್ನಾಥ ಸೂರ್ಯವಂಶಿಯವರು ಬೀದಿ ವ್ಯಾಪಾರಿಗಳ ಬೇಡಿಕೆಗಳ ಬಗ್ಗೆ ದಸ್ತಿಯವರು ಮಂಡಿಸಿದ ಬೇಡಿಕೆಗಳು ಜಾರಿಯಾಗುವವವರೆಗೆ ಬೀದಿ ವ್ಯಾಪಾರಿಗಳ ಸಂಘಟಿತ ಹೋರಾಟ ನಡಸುವ ಬಗ್ಗೆ ಸಂಘ ಬದ್ಧತೆಯಿಂದ ಹೋರಾಟ ನಡೆಸಿ ನ್ಯಾಯ ಪಡಯುವವದರ ಬಗ್ಗೆ ಬೀದಿ ವ್ಯಾಪಾರಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಐದು ಜನ ಬೀದಿ ವ್ಯಾಪಾರಿ ಗಳಾದ ಶ್ರೀಮತಿ ಭಾಗಮ್ಮ ಚೌದ್ರಿ, ಶ್ರೀಮತಿ ಸವಿತಾ ಜಿಂಗಾಡೆ, ಶ್ರೀ ಮಲ್ಲಿಕಾರ್ಜುನ ಬಾಗೊಡಿ, ಶ್ರೀನಿವಾಸ ಫಿರಂಗೆಯವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೋರಾಟಗಾರ ದತ್ತು ಭಾಸಗಿ, ಶಿವಕುಮಾರ ಭಾಗೂಡಿ, ಬಸವರಾಜ ಸಾವಳಗಿ, ತಿರುಪತಿ ಪೀಸೆಯವರು ಮಾತ್ನಾಡಿದರು. ಈ ದಿನಾಚರಣೆಯಲ್ಲಿ ನೂರಾರು ಬೀದಿ ವ್ಯಾಪಾರಿ ಗಳು ಭಾಗವಹಿಸಿದ್ದರು.ಕಾರ್ಯಕ್ರಮದ ನಿರ್ವಹಣೆ ಸೋಮಶೇಖರ ಬಣಗಾರ ನೆರವೇರಿಸಿದರು.
ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಫದ ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ ಹಾಗೂ ಸ್ಥಳೀಯ ಸಂಘಗಳ ಮುಖಂಡರು ಉಪಸ್ಥಿತರಿದರು.