ಸುರಪುರ: ನಗರದ ತಿಮ್ಮಾಪುರ(ಹಸನಾಪುರ) ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ವಾರಿಯರ್ಸ್ಗಳಾದ ಆರೋಗ್ಯ,ಅಂಗನವಾಡಿ ಹಾಗೂ ಆಶಾ ಕಾಯಕರ್ತೆಯರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ತಾಲೂಕು ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ಉಪಸ್ಥಿತಿಯಲ್ಲಿ ಆರೋಗ್ಯ ಇಲಾಖೆಯ ವೈದ್ಯರು,ಡಿ ಗ್ರುಪ್ ಸಿಬ್ಬಂದಿಗಳ, ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಸೇರಿದಂತೆ ೬೭ಕ್ಕೂ ಜನರಿಗೆ ಕೋವಿಡ್-೧೯ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಅಲ್ಲಾವುದ್ದಿನ್,ನೋಡಲ್ ಅಧಿಕಾರಿ ಡಾ.ಓಂಪ್ರಕಾಶ ಅಂಬೂರೆ,ಡಾ.ಸ್ಮಿತಾ ಅಂಬೂರೆ, ಸಿಬ್ಬಂದಿಗಳಾದ ಹಬೀಬಸಾಬ,ಅಬ್ದುಲ್ ರಫೀಕ್,ಜಹೀರ ಹುಸೇನಿ,ಅಶೋಕ ರೆಡ್ಡಿ,ಅಬ್ದುಲ್ ರಶೀದ,ಹಬೀಬುಲ್ಲಾ,ರೇಖಾ,ಗಂಗಾ ಇತರರಿದ್ದರು.