ಸುರಪುರ: ತಾಲೂಕಿನ ಕೆಂಭಾವಿ ಕಡೆಯಿಂದ ಪೀರಾಪುರ ಕಡೆಗೆ ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ ೬೦ರ ಬೆಂಡರ ತಳ್ಳಳ್ಳಿ ಮೂಲಕ ಆಲಾಳ ಮಾರ್ಗವಾಗಿ ಹೋಗುವ ರಸ್ತೆ ಸುಮಾರು ೩ ಕಿಲೋ ಮೀಟರ್ ವರೆಗೆ ಸಂಪೂರ್ಣ ಹಾಳಾಗಿದೆ,ಇದರಿಂದಾಗಿ ಜನರ ಓಡಾಟಕ್ಕೆ ತೀವ್ರ ತೊಂದರೆಯುಂಟಾಗಿದೆ ಎಂದು ಮಾದಿಗ ಯುವ ಸೇನೆಯ ಆರೋಪಿಸಿದೆ.
ಈ ಕುರಿತು ಲೋಕೊಪಯೋಗಿ ಇಲಾಖೆಯ ಸಹಾಯಕ ಅಭಿಯಂತರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕೂಡಲೆ ಈ ಬೆಂಡರ ತಳ್ಳಳ್ಳಿ ಆಲಾಳ ರಸ್ತೆಯನ್ನು ಸುರಸ್ತಿಗೊಳಿಸಬೇಕು ಇಲ್ಲವಾದಲ್ಲಿ ಮಾದಿಗ ಯುವ ಸೇನೆಯ ವತಿಯಿಂದ ಲೋಕೊಪಯೋಗಿ ಇಲಾಖೆ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶೇಖರ ದೊಡ್ಮನಿ ಬಸವರಾಜ ಮುಷ್ಠಳ್ಳಿ ಸೇರಿದಂತೆ ಇತರರಿದ್ದರು.