ಲಾಲ್‌ಗಿರಿ ಕ್ರಾಸ್‌ಗೆ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ನಾಮಕರಣಕ್ಕೆ ನಿರ್ಧಾರ

0
41

ಕಲಬುರಗಿ: ನಗರದ ಲಾಲ್‌ಗಿರಿ ಕ್ರಾಸ್‌ಗೆ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಅಣ್ಣಪ್ಪ ಜಮಾದಾರ್ ಅವರು ಇಲ್ಲಿ ಹೇಳಿದರು.

ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಎದುರು ಇರುವ ಲಾಲ್‌ಗಿರಿ ಕ್ರಾಸ್ ಜಾತ್ರಾ ಮೈದಾನದಲ್ಲಿ ಕೋಲಿ ಸಮಾಜದವರು ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜ ಬಾಂಧವರು ಪ್ರತಿ ವರ್ಷ ಇದೇ ಸ್ಥಳದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.

Contact Your\'s Advertisement; 9902492681

ಈ ಬಾರಿ ಮಹಾಮಾರಿ ಕೊರೋನಾದಿಂದ ಇಡೀ ಸಮಾಜ ಸಂಕಷ್ಟಕ್ಕೆ ಒಳಗಾಗಿತ್ತು. ಈಗ ಕೊರೋನಾ ಸಂಕಷ್ಟದಿಂದ ಹೊರಬಂದಿದ್ದೇವೆ. ಇದರಿಂದಾಗಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾಗಿದೆ. ಲಾಲ್‌ಗಿರಿ ಕ್ರಾಸ್‌ಗೆ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತವೆಂದು ನಾಮಕರಣ ಮಾಡುವ ದಿಸೆಯಲ್ಲಿ ತಾಂತ್ರಿಕವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತ ಮಲ್ಲಿಕಾರ್ಜುನ್ ವ್ಹಿ.ಎನ್. ಅವರ ಸಂಪಾದಕತ್ವದಲ್ಲಿನ ಪ್ಯಾಶನ್ ಪೀಪಲ್ ಕನ್ನಡ ದಿನಪತ್ರಿಕೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕುರಿತ ವಿಶೇಷ ಸಂಚಿಕೆ ಹಾಗೂ ನೂತನ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷತೆಯನ್ನು ಸಮಾಜದ ಗಣ್ಯರಾದ ಪ್ರಭಾಕರ್ ಬೆನಕನಳ್ಳಿ ಅವರು ವಹಿಸಿದ್ದರು. ವೇದಿಕೆಯ ಮೇಲೆ ದೇವೆಂದ್ರಪ್ಪ ಬಾಡ್ಯಾಳ್, ಶರಣಪ್ಪ ಕುಮಸಗಿ, ರಾಜಶೇಖರ್ ದಂಡೋತಿ, ವೈ.ಎಚ್. ಕೋಲಕರ್, ಶಿವಕುಮಾರ್ ಹೊನಗುಂಟಾ, ಕರ್ನಾಟಕ ನವ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ್, ಸಂತೋಷ್ ಬೆಣ್ಣೂರ್, ಶರಣಪ್ಪ ಹರಸೂರ್, ಅಣ್ಣಪ್ಪ ಜಮಾದಾರ್, ಸಂಚಾರಿ ಪೋಲಿಸ್ ಅಧಿಕಾರಿ ಶಾಂತಾಬಾಯಿ, ಶಾಂತಪ್ಪ ಕೂಡಿ, ಪತ್ರಕರ್ತ ಬಸವರಾಜ್ ಚಿನಿವಾರ್ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದ ನಂತರ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here