ಡಾ. ಶಿವಕುಮಾರ ಮಹಾಸ್ವಾಮಿ ಆಧುನಿಕ ಕಾಲದ ಸಂತ: ಸಂಗಮೇಶ ಸರಡಗಿ

0
31

ಕಲಬುರಗಿ: ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡು ನಡೆ-ನುಡಿ ಒಂದಾಗಿಸಿ ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಸಮಸಮಾಜ ನಿರ್ಮಾಣ ಮಾಡಿದ ಆಧುನಿಕ ಕಾಲದ ಸಂತ ತುಮಕೂರಿನ ಡಾ. ಶಿವಕುಮಾರ ಮಹಾಸ್ವಾಮಿಗಳು ಎಂದು ಜ್ಞಾನಜ್ಯೋತಿ ಕರಿಯರದ ಮುಖ್ಯಸ್ಥ ಸಂಗಮೇಶ ಸರಡಗಿ ಹೇಳಿದರು.

ನಿನ್ನೆ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ವತಿಯಿಂದ ಸಂತೋಷ ಕಾಲೋನಿಯ ಕೆ.ಎಚ್.ಬಿ. ಗ್ರೀನ್ ಪಾರ್ಕನಲ್ಲಿ ಹಮ್ಮಿಕೊಂಡ ತುಮಕೂರ ಪೂಜ್ಯರ ೨ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಮಸಮಾಜ ನಿರ್ಮಾಣ ಮಾಡಿದರೆ ೨೦ನೇ ಶತಮಾನದಲ್ಲಿ ನಡೆದಾಡುವ ದೇವರೆನಿಸಿಕೊಂಡ ತುಮಕೂರು ಪೂಜ್ಯರು ಸರ್ವ ಜಾತಿ, ಧರ್ಮ ಒಂದುಗೂಡಿಸಿ ನಾವೆಲ್ಲರೂ ಒಂದೇ ಎಂದು ಸಮಸಮಾಜ ನಿರ್ಮಾಣ ಮಾಡಲು ದಿಟ್ಟ ಹೆಜ್ಜೆ ಇಟ್ಟ ಮಹಾನ ಸಂತ ಎಂದು ಬಣ್ಣಿಸಿದರು.

Contact Your\'s Advertisement; 9902492681

ಕಲ್ಲಹಂಗರಗಾ ಸರಕಾರಿ ಶಾಲೆಯ ಶಿಕ್ಷಕರಾದ ಶಿವಕಾಂತ ಚಿಮ್ಮಾ ಮಾತನಾಡುತ್ತಾ ಸಮಾಜದಲ್ಲಿ ನಾವೆಷ್ಟೆ ದೊಡ್ಡ ವ್ಯಕ್ತಿ ಎನಿಸಿಕೊಂಡರು ನಡೆ-ನುಡಿಯಲ್ಲಿ ವ್ಯತ್ಯಾಸವಾದರೆ ನೋಡುವವರ ಮನದಲ್ಲಿ ಬಹಳ ಚಿಕ್ಕ ವ್ಯಕ್ತಿಗಳಾಗಿ ಕಾಣಿಸುತ್ತೇವೆ, ಆದರೆ ಕಾಯಕವೇ ಕೈಲಾಸವೆಂದು ತಿಳಿದು ತ್ರಿಕಾಲ ಜ್ಞಾನಿಗಳಾಗಿ ಮಾನವೀಯ ಮೌಲ್ಯಗಳಿಂದ ಜೀವನ ನಡೆಸಿ ಹಲವಾರು ಜನರ ಮನದಲ್ಲಿ ದೈವಸ್ವರೂಪಿಯಾದ ಅಕ್ಷರ ಹಾಗೂ ಅನ್ನದಾಸೋಹಿ ಡಾ. ಶಿವಕುಮಾರ ಅಪ್ಪಾಜಿಯವರು ಎಂದು ಹೇಳಿದರು.

ಸಂಘದ ಅಧ್ಯಕ್ಷ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಕೆ.ಎಚ್.ಬಿ. ಗ್ರೀನ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ, ಶಿಕ್ಷಕರಾದ ಚಂದ್ರಕಾಂತ ತಳವಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘಟಕರಾದ ಬಸವರಾಜ ಹೇಳವರ, ಸೂರ್ಯಕಾಂತ ಸಾವಳಗಿ, ವಿನೋದಕುಮಾರ ಪಡನೂರ, ನಂದಿನಿ ಚಿಮ್ಮಾ, ಸಂಗೀತಾ ಟೈಗರ, ಹಣಮಂತ ಪೂಜಾರಿ, ಬಸವರಾಜ ಬಿರಾದಾರ, ಚಂದ್ರಶೇಖರ ಹರವಾಳ, ರಾಮದಾಸ ಪಾಟೀಲ, ರೇವಣಸಿದ್ದ ಚಿಮ್ಮಾ, ಭವಾನಿ ಚಿಮ್ಮಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here