ಸರಕಾರವನ್ನು ಟೀಕಿಸಿದಕ್ಕೆ ಸಾಹಿತಿ ಹಂಪನಾ ಅವರಿಗೆ ಪೊಲೀಸರಿಂದ ವಿಚಾರಣೆ: ಸಾಹಿತಿಗಳಿಂದ ಖಂಡನೆ

0
53

ಕಲಬುರಗಿ: ನಾಡೋಜ ಹಂಪನಾ ಅವರನ್ನು ಠಾಣೆಗೆ ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಂಡ ಮಂಡ್ಯ ಜಿಲ್ಲೆಯ ಪೊಲೀಸರ ಸಂವಿಧಾನ ನಿಯಮ ವಿರೋಧಿ ನಡವಳಿಕೆಯಾಗಿದ್ದು, ಈ ಕೃತ್ಯ ಎಸಗಿರುವ ಪೊಲೀಸ ಅಧಿಕಾರಿಯನ್ನು ಅಮಾನತುಗೊಳಿಸಿ, ಸರಕಾರ ಬೇಷರತ್ತಾಗಿ ಕ್ಷಮೆ ಯಾಚಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಸಾಹಿತಿಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟವು, ಸಾಹಿತ್ಯಿಕ ಸಭೆಯಲ್ಲಿ ಸರಕಾರವನ್ನು ಟೀಕಿಸಿದ್ದಕ್ಕಾಗಿ ಪೊಲೀಸರು ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇದು ಸರಕಾರವೇ ಭಯೋತ್ಪಾದನೆ ಹುಟ್ಟಿಸುವ ಕ್ರಮವಾಗಿದೆ. ಭಾರತ ದೇಶವು ಪ್ರಜಾಪ್ರಭುತ್ವ ತತ್ವ ಹೊಂದಿದೆ. ಸರ್ವಾಧಿಕಾರಿ ಫ್ಯಾಸಿಸ್ಟ್ ಗಿರಿಯನ್ನು ಬಿಜೆಪಿ ಸರಕಾರ (ಕೇಂದ್ರ ಮತ್ತು ರಾಜ್ಯ) ಗಳು ಅತ್ಯಂತ ನಿರ್ಲಜ್ಜತೆಯಿಂದ ಜಾರಿ ಮಾಡಲು ಹೊರಟಿವೆ ಎಂದು ಸಾಹಿತಿ ಪ್ರೊ. ಆರ್ ಕೆ ಹುಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಸರಕಾರದ ತಪ್ಪು ನಡೆಯನ್ನು ಪ್ರಜೆಗಳು ಟೀಕಿಸುತ್ತಾರೆ. ಭಿನ್ನಾಭಿಪ್ರಾಯ ವ್ಯಕ್ತಿಸುತ್ತಾರೆ. ಇದು ಸಂವಿಧಾನವು ನಮಗೆ ಕೊಡಮಾಡಿದ ಹಕ್ಕಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಜಾಪ್ರಭುತ್ವ ವನ್ನೇ ಸರ್ವನಾಶ ಮಾಡಲು ಹೊರಟಿವೆ. ‘ಗೋಲಿ ಮಾರೋ ಸಾಲೋಂಕೊ’ ಎಂದವನ ಮೇಲೆ ಸರಕಾರವು ಕ್ರಮ ಕೈಗೊಳ್ಳುವುದಿಲ್ಲ. ಬದಲಿಗೆ ಸರಕಾರವನ್ನು ಟೀಕಿಸಿದ್ದಕ್ಕಾಗಿ ರೈತರ ಪರವಾಗಿ ಮಾತಾಡಿದ್ದಕ್ಕಾಗಿ ಎಂಬತ್ತರ ಇಳೆ ವಯಸಿನ ಹಿರಿಯ ಸಾಹಿತಿಯನ್ನು ಠಾಣೆಗೆ ಕರೆಯಿಸುವಂಹ ಉದ್ಧಟತನವು ಅಕ್ಷಮ್ಯವಾದದ್ದು ಎಂದು  ಡಾ ಪ್ರಭು ಖಾನಾಪುರೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕೃತ್ಯ ಎಸಗಿರುವ ಪೋಲಿಸ ಅಧಿಕಾರಿಯನ್ನು ಅಮಾನತ್ತುಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಸರಕಾರದ ಇಂತಹ ಫ್ಯಾಸಿಸ್ಟ್ ಹಿಟ್ಲರ್ ಶಾಹಿಯ ವಿರುದ್ಧ ಹೋರಾಟಗಳು ಭುಗಿಲೇಳುವವುದೆಂದು ಎಚ್ಚರಿಕೆ ನೀಡಿದ್ದಾರೆ.

ಡಾ.ಕಾಶಿನಾಥ ಅಂಬಲಗಿ, ಸನತಕುಮಾರ ಬೆಳಗಲಿ, ಕೆ ನೀಲಾ, ಸಂಧ್ಯಾ ಹೊನಗುಂಟಿಕರ್, ಅರ್ಜುನ್ ಭದ್ರೆ, ದತ್ತಾತ್ರೇಯ ಇಕ್ಕಳಕಿ, ಜಾವೇದ್ ಅಹ್ಮದ್, ಮಾರುತಿ ಗೋಖಲೆ, ಲವಿತ್ರ ವಸ್ತ್ರದ್, ಶಾಂತೇಶ ಕೋಡ್ಲೆ ಸೇರಿದಂತೆ ಪ್ರಗತಿ ಪರ ಸಾಹಿತಿಗಳು ಹೇಳಿಕೆ ಬಿಡುಗಡಿ ಮಾಡಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here