ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಡಾ. ದಯಾನಂದ ಅಗಸರ್ ಅವರು ನೇಮಕಗೊಂಡಿದ್ದಾರೆ.
ಈ ಹಿಂದೆ ಚಂದ್ರಕಾಂತ ಯಾತನೂರು ಅವರು ಹಂಗಾಮಿ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿದ್ದು, ಇಂದು ಸಂಜೆ ವೇಳೆಯಲ್ಲಿ ಡಾ. ದಯಾನಂದ ಅಸಗರ್ ಅವರು ಅಧೀಕೃತವಾಗಿ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ವಿವಿಯ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ನೂತನ ಕುಲಪತಿಗಳಿಗೆ ಬರ ಮಾಡಿಕೊಂಡು ಶುಭಾಶಯ ಕೋರಿದ್ದರು.
ಪ್ರೊ. ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಅತಿಥಿ ಉಪನ್ಯಾಸಕರ ವತಿಯಿಂದ ಇಂದು ಹೂಗುಚ್ಛ ನೀಡಿ ಸನ್ಮಾನಿಸಿ ಸುಭ ಕೋರಿದ್ದರು.
ಈ ಸಂದರ್ಭದಲ್ಲಿ ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಗುಂಡಪ್ಪ ಸಿಂಗೆ ಸಂಶೋಧನಾ ವಿದ್ಯಾರ್ಥಿ ಹಣಮಂತ ಎಂ. ತಳಕೇರಿ ಸೇರಿದಂತೆ ಮುಂತಾದವರು ಇದ್ದರು.