ಸುರಪುರ: ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ನೇರವಾಗಿ ಖಂಡಿಸಿದ ಹಾಗು ಮೂಢನಂಬಿಕೆ ಕಂದಾಚಾರಗಳನ್ನು ವಿರೋಧಿಸಿದ ಅಂಬಿಗರ ಚೌಡಯ್ಯನವರ ವಚನಗಳು ಮಾನವ ಸಮಾಜಕ್ಕೆ ಮದ್ದು ಇದ್ದಂತೆ ಎಂದು ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಭಂಡಾರೆಪ್ಪ ನಾಟೇಕಾರ್ ಮಾತನಾಡಿದರು.
ತಾಲೂಕಿನ ವಾರಿ ಸಿದ್ಧಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ೯೦೧ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ,ಬಸವಾದಿ ಶರಣರ ಅನುಭವ ಮಂಟಪದಲ್ಲಿ ತಮ್ಮ ನೇರ ನುಡಿಗಳ ವಚನಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಅಂಬಿಗರ ಚೌಡಯ್ಯನವರು ಬರೆದ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಪೋತಲ್ಕರ್ ತಳವಾರ ಪರಿವಾರ ಬುಡಕಟ್ಟು ಹೋರಾಟ ಸಮಿತಿ ತಾಲೂಕು ಅಧ್ಯಕ್ಷರಾದ ದೇವೆಂದ್ರಪ್ಪಗೌಡ ಮಾಲಿ ಪಾಟೀಲ್ ಕಾರ್ಯದರ್ಶಿ ಸಿದ್ದಪ್ಪ ಕಮತಗಿ ಹಣಮಂತ ಬೈರಿಮಡ್ಡಿ ಸಂಗಪ್ಪ ಮೂಲಿಮನಿ ಹಣಮಂತ ಕಮತಗಿ ಮಲ್ಲು ವಿಷ್ಣುಸೇನಾ ಲಕ್ಷ್ಮಣ ಕಮತಗಿ ಮಹಾದೇವಪ್ಪ ಕಮತಗಿ ಮುದುಕಪ್ಪ ಕಮತಗಿ ಮರೆಪ್ಪ ಕಮತಗಿ ಶರಣಪ್ಪ ಕಮತಗಿ ದೇವಪ್ಪ ಕಮತಗಿ ನಿಂಗಪ್ಪ ಕಮತಗಿ ಮರೆಪ್ಪ ಮೂಲಿಮನಿ ಗೋವಿಂದಪ್ಪ ಕಮತಗಿ ನಿಂಗು ಕಮತಗಿ ಮಂಜು ಕಮತಗಿ ಕಾಮಣ್ಣ ಕಮತಗಿ ತಿಮ್ಮಣ್ಣ ಹವಲ್ದಾರ್ ಸೇರಿದಂತೆ ಅನೇಕರಿದ್ದರು.