ಸುಭಾಶಚಂದ್ರ ಬೋಸರು ಕ್ರಾಂತಿಕಾರಿ ದೇಶ ಪ್ರೇಮಿಗಳಾಗಿದ್ದರು: ಡಾ. ಐ.ಎಸ್. ವಿದ್ಯಾಸಾಗರ

0
23

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ನೇತಾಜಿ ಸುಭಾಶಚಂದ್ರ ಭೋಸರ ೧೨೫ನೇ ಜನ್ಮ ದಿನಾಚರಣೆ ಆಚರಿಸಲಾಯಿತು.

ಪರಾಕ್ರಮ ದಿವಸದ ಕಾರ್ಯಾಕ್ರಮದ ಉದ್ಘಾಟಕರಾಗಿ ಆಗಮಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಐ.ಎಸ್. ವಿದ್ಯಾಸಾಗರ ಅವರು ಮಾತನಾಡಿದರು.

Contact Your\'s Advertisement; 9902492681

ಸುಭಾಶಚಂದ್ರ ಭೋಸರು ಸ್ವಾತಂತ್ರ್ಯ ಚಳುವಳಿಯಲ್ಲಿ ವಿಭಿನ್ನ ಪಾತ್ರ ವಹಿಸಿದರು. ಜರ್ಮನ ದೇಶದ ಹಿಟ್ಲರ್ ನೊಂದಿಗೆ ಕುಡಿಕೊಂಡು ಭಾರತದ ಬ್ರಿಟಿಷರನ್ನು ಹೊಡೆದೊಡಿಸಲು ಕಂಕಣ ಬದ್ದರಾಗಿದ್ದರು ಎಂದು ಹೇಳುತ್ತಾ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿ ಕೊಳ್ಳಬೇಕೆಂದರು ಎಂದು ಕರೆ ನೀಡಿದರು.

ಇತಿಹಾಸ ಪ್ರಾಧ್ಯಾಪಕರಾದ ಡಾ. ಗಾಂಧಿಜಿ ಮೋಳಕೆರೆ ರವರು ಭಾಷಣಕಾರರಾಗಿ ನೇತಾಜಿ ಸುಭಾಶ ಚಂದ್ರ ಭೋಸರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ದ್ವಿಮುಖ ಪಾತ್ರ ವಹಿಸಿದರು ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು ಪಾಲನೆ ಮಾಡಿಕೊಂಡು ತನ್ನ ಪ್ರಾಣವನ್ನು ದೇಶಕ್ಕಾಗಿ ಮುಡಿಪಿಟ್ಟರು. ಬ್ರಿಟಿಷರನ್ನು ದೇಶದಿಂದ ಮುಕ್ತಿಗೊಳಿಸುವುದಕ್ಕಾಗಿ ಇಂಡಿಯನ್ ನ್ಯಾಷನಲ್ ಆರ್ಮಿ ಎಂಬ ಸೈನಿಕ ಪಡೆಯನ್ನು ರಚಿಸಿ ಹೊರಾಡಿದ ಮಹಾನ ದೇಶ ಭಕ್ತ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ನೇತಾಜಿ ಸುಭಾಶ ಚಂದ್ರ ಭೋಸರ ಕುರಿತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಪ್ರೋ. ನಿರ್ಮಲಾ ಸಿರಗಾಪುರ ಡಾ. ಅನೀಲಕುಮಾರ ರಾಜನಾಳಕರ, ಪ್ರೋ. ಮಹಾಂತೇಶ ಬಿದನೂರು, ಪ್ರೋ. ದಶರಥ, ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾಯೋಜನೆಯ ಅಧಿಕಾರಿಗಳಾದ ಪ್ರೋ. ಸಿದ್ದಪ್ಪ ಎಂ. ಕಾಂತಾ ಕಾರ್ಯಾಕ್ರಮ ಸ್ವಾಗತ ಮತ್ತು ನಿರೂಪಿಸಿದರು. ಪ್ರೋ. ಅರುಣ ರವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here