ಕಲಬುರಗಿ: ಕನ್ನಡದ ಮಹತ್ವದ ಕವಿ, ನಾಟಕಕಾರ ಮತ್ತು ವಿಮರ್ಶಕರಾಗಿರುವ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರುಇಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಕನ್ನಡ ವಿಭಾಗದಲ್ಲಿ’ಭಾರತೀಯ ಸಂಸ್ಕೃತಿಯಲ್ಲಿ ಭಕ್ತಿ, ಸಿದ್ದ ಮತ್ತು ಸೂಫಿ ಪರಂಪರೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಈ ಪರಂಪರೆಗಳು ಭಾರತೀಯ ಸಮಾಜದಲ್ಲಿ ಸಹಜವಾಗಿ ಇಂದಿಗೂ ಬದುಕಿದ್ದು ಇವುಗಳನ್ನು ಅಧ್ಯಯನ ಮಾಡುವತಾತ್ವಿಕತೆಯನ್ನುಆಧುನಿಕ ವಿದ್ವತ್ತು ಬೆಳೆಸಿಕೊಂಡಿಲ್ಲ ಎಂದು ಹೇಳಿದರು.
ಶಿವಪ್ರಕಾಶ್ ಅವರುವ್ಯಕ್ತಿತ್ವ ಸಾಧನೆಯಾಗಿ ರೂಪುಗೊಳ್ಳುವ ಭಕ್ತಿ ಮಾರ್ಗವನ್ನು ವಿವರವಾಗಿ ಮತ್ತು ವಿಮರ್ಶಾತ್ಮಕವಾಗಿ ಚರ್ಚಿಸಿದರು. ಕರ್ನಾಟಕದ ಹಲವಾರು ಪಂಥಗಳ ಜೊತೆಗೆ ಭಾರತದ ವಿವಿಧ ಪಂಥಗಳನ್ನು ಚರ್ಚೆಗೆತೆಗೆದುಕೊಂಡು ಭಕ್ತಿ, ತಂತ್ರ ಮೊದಲಾದವುತಾತ್ವಿಕ ಪರಿಕಲ್ಪನೆಗಳು ವಿವಿಧ ಪಂಥಗಳಲ್ಲಿ ಯಾವರೀತಿಯ ಸ್ವರೂಪವನ್ನುಪಡೆದುಕೊಳ್ಳುತ್ತವೆ ಎಂಬುದನ್ನುಪರಿಚಯಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾಗಿರುವಡಾ. ಬಸವರಾಜಕೋಡಗುಂಟಿ ಮತ್ತು ಹಲವು ಪ್ರಾಧ್ಯಾಪಕರು, ಸಂಶೋಧಕರು ಹಾಜರಿದ್ದರು. ಆನ್ಲಯಿನ್ ಮೂಲಕ ಹಲವರು ಹಾಜರಿದ್ದರು. ಉಪನ್ಯಾಸದ ನಂತರ ಮುಖ್ಯಸ್ಥರಾದ ಬಸವರಾಜಕೋಡಗುಂಟಿ ಅವರು ಮಾತನಾಡಿದರು.
ಕಾರ‍್ಯಕ್ರಮದಲ್ಲಿಡಾ. ಜಯದೇವಿ ಜಂಗಮಶೆಟ್ಟಿಅವರು ವಚನಪ್ರಾರ್ಥನೆ ಹಾಡಿದರು. ಬಸ್ಸಯ್ಯ ಸ್ವಾಮಿಅವರು ಪರಿಚಯಿಸಿದರು, ಸಂಗನಗೌಡ ಹಿರೇಗೌಡಅವರು ವಂದಿಸಿದರು ಮತ್ತು ಮಧು ಬಿರಾದಾರಅವರು ನಿರೂಪಣೆ ಮಾಡಿದರು.