ಸುರಪುರ: ಭಾರತದ ಸ್ವಾತಂತ್ರ್ಯ ಚಳುವಳಿಗೆ ಕ್ರಾಂತಿಯ ಹೊಸ ರೂಪ ಕೊಟ್ಟವರು ನೇತಾಜಿ ಸುಭಾಷ ಚಂದ್ರ ಭೊಸ್ ಎಂದು ಸುರಪುರ ನಗರಸಭೆ ಉಪಾಧ್ಯಕ್ಷ ಮಹೇಶ ಪಾಟಿಲ್ ಸೂಗುರು ಹೇಳಿದರು.
ನಗರದ ರಂಗಂಪೇಟೆಯ ಬಸವಪ್ರಭು ಕಂಪ್ಯೂಟರ್ ಇನ್ಸ್‌ಟ್ಯೂಟ್ ನಲ್ಲಿ ಸಗರನಾಡು ಸೇವಾ ಪ್ರತಿಷ್ಠಾನವತಿಯಿಂದ ಏರ್ಪಡಿಸಿದ್ದ ನೇತಾಜಿ ಸುಭಾಷ ಚಂದ್ರ ಭೊಸ್ ಅವರ ಜಯಂತ್ಯೊತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಗಾಂಧೀಜಿಯವರ ನೇತೃತ್ವದ ಅಂಹಿಸಾವಾದದ ಚಳುವಳಿಯ ಜೊತೆಗೆ ಹೊಸತನದ ಚಳುವಳಿಗೆ ಕ್ರಾಂತಿಯ ರೂಪ ಕೊಟ್ಟು ಬ್ರಿಟೀಷರನ್ನು ಭಾರತ ಬಿಟ್ಟು ಓಡಿಸುವಲ್ಲಿ ನೇತಾಜಿಯವರ ಪಾತ್ರ ಅತ್ಯಂತ ಮಹತ್ವದಾಗಿತ್ತು ಎಂದರು.
ಇನ್ನೊರ್ವ ಅತಿಥಿಗಳಾಗಿ ಪಾಲ್ಗೊಂಡಿದ್ದ ಅನ್ನದಾತ ಪೌಂಡೆಶನ್‌ನ ಅಧ್ಯಕ್ಷ ರಂಗನಗೌಡ ಪಾಟೀಲ್ ದೇವಿಕೇರಾ ಮಾತನಾಡಿ ಅಜಾದ್-ಹಿಂದ್-ಫೌಜ್ ಎನ್ನುವ ಸೈನ್ಯವನ್ನು ಕಟ್ಟಿ ದೇಶದ ಯುವಜನರಲ್ಲಿ ಸ್ವಾತಂತ್ಯ್ರ ಮತ್ತು ಸ್ವಾಭಿಮಾನದ ಚಿಂತನೆ ಮೂಡಿಸುವಲ್ಲಿ ನೇತಾಜಿ ಪಟ್ಟ ಶ್ರಮ ಮಹತ್ವದ್ದು ಎಂದು ಹೇಳಿದರು.
ಕಾರ್ಯಾಕ್ರಮವನ್ನು ಸುರಪುರ ನಗರಸಭೆ ಅಧ್ಯಕ್ಷ ಶ್ರೀಮತಿ ಸುಜಾತಾ ವೇಣುಗೋಪಾಲ ನಾಯಕ ಜೇವರ್ಗಿ ಉದ್ಘಾಟಿಸಿದರು, ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತವಿಕವಾಗಿ ಮಾತನಾಡಿದರು. ಯುವ ಮುಖಂಡ ಹರೀಶ ತ್ರಿವೇದಿ, ವಿಜಯಕುಮಾರ ಅಂಗಡಿ ಅತಿಥಿಗಳಾಗಿ ಪಾಲ್ಗೊಂಡಿದ್ದರು, ಕಾರ್ಯಕ್ರಮವನ್ನು ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಶೃತಿ ಸಂಗಡಿಗರು ಪ್ರಾರ್ಥಿಸಿದರು, ರಾಜು ನಂದಗೀರಿ ಸ್ವಾಗತಿಸಿದರು, ಪ್ರವೀಣ ಜಕಾತಿ ವಂದಿಸಿದರು.