ಸುರಪುರ:ನೇತಾಜಿ ಶುಭಾಶ್ಚಂದ್ರ ಬೋಸ್ ಜಯಂತಿ ಅಂಗವಾಗಿ ರಕ್ತದಾನ

0
19

ಸುರಪುರ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಶುಭಾಶ್ಚಂದ್ರ ಬೋಸ್ ಅವರ ೧೨೫ನೇ ಜಯಂತಿ ಆಚರಣೆ ಅಂಗವಾಗಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾಯೋಜನೆ ಹಾಗು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.

ರಕ್ತದಾನಕ್ಕೂ ಮುನ್ನ ಕಾಲೇಜಿನ ಸಭಾಂಗಣದಲ್ಲಿ ನೇತಾಜಿ ಶುಭಾಶ್ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು,ಈ ಸಂದರ್ಭದಲ್ಲಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕರ ಸಂಯೋಜಕ ರಾಘವೇಂದ್ರ ಗುಡಗುಂಟಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಬೆಳವಣೆಗೆಯ ಮೂಲಕ ಹೊರಾಟ ನಡೆಸಿದ ಸುಭಾಶಚಂದ್ರ ಭೋಸ ಅವರು ಅನೇಕ ಯುವ ಪಡೆಗಳನ್ನು ಕಟ್ಟಿಕೊಂಡು ದೇಶದ ಮೂದಲ ಸೇನೆಯನ್ನು ಕಟ್ಟಿದ ಮಹಾನ ವ್ಯಕ್ತಿ ಹೀಗಾಗ ಪ್ರತಿ ಹೋರಾಟದಲ್ಲಿ ನೇತಾಜಿ ಅವರ ಪ್ರಾತ್ರ ಬಹು ಮುಖ್ಯವಾದದ್ದಾಗಿದೆ ಎಂದರು.

Contact Your\'s Advertisement; 9902492681

ನೇತಾಜಿ ಅವರು ದೇಶದ ಎಲ್ಲ ಯುವಕರಿಗೆ ಕಣ್ಮಣಿ ಇದ್ದಂತೆ. ಅವರು ಭಾರತ ಸ್ವಾತಂತ್ರ್ಯದ ಬಗ್ಗೆ ಕ್ರಾಂತಿಕಾರಕ ಕಲ್ಪನೆಯುಳ್ಳವರಾಗಿದ್ದರು, ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂದಿದ್ದ ಮಹಾತ್ಮ ನೇತಾಜಿ ಎಂದು ಬಣ್ಣಿಸಿದರು.

ರಕ್ತದಾನದ ಕುರಿತು ಮಾತನಾಡಿ, ರಕ್ತದಾನ ಎಂದರೆ ಜೀವದಾನ ಮಾಡಿದಂತೆ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ತಾವೂ ಆರೋಗ್ಯವಂತರಾಗುವುದಲ್ಲದೆ ಇತರರಿಗೂ ಆರೋಗ್ಯ ನೀಡಬೇಕು.ನಾನು ಹಿಂದೆ ಪ್ರತಿ ವರ್ಷ ಆಗಸ್ಟ್ ೧೫ ರಂದು ರಕ್ತದಾನ ಮಾಡುತ್ತಿದ್ಧೆ ಎಂದು ನೆನಪಿಸಿಕೊಂಡರು.

ನಂತರ ನಡೆದ ರಕ್ತದಾನ ಶಿಬಿರದಲ್ಲಿ ೨೦ ಜನ ರಕ್ತಾದನ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ವೆಂಕೋಬ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು ಡಾ: ಸಂಗಣ್ಣ ರಾಂಪುರೆ, ಡಾ: ಭೀಮಣ್ಣ, ಮಾಲಿಪಾಟೀಲ್ ಪೆದ್ದಪ್ಪ ನಾಯಕ, ಸಿದ್ದಪ್ಪ ದಿಗ್ಗಿ, ವಿಶ್ವನಾಥ ರೆಡ್ಡಿ ಇದ್ದರು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಬಲಭೀಮದೇಸಾಯಿ ನೇತೃತ್ವ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಪೆದ್ದಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here