ಸುರಪುರ: ನಗರದ ಹಸನಾಪುರ ಪೆಟ್ರೋಲ ಬಂಕ್ ಬಳಿಯಲ್ಲಿರುವ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಮೂರ್ತಿ ಸ್ವಚ್ಛಗೊಳಿಸಲು ಆಗ್ರಹಿಸಿ ಸುರಪುರ ತಾಲೂಕು ಸಗರನಾಡು ಎಲೆಕ್ಟ್ರೀಕಲ್ ಕಾರ್ಮಿಕರ ಸಂಘದ ಮುಖಂಡರು ನಗರಸಭೆಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು,ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಸುರಪುರದ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಜಗತ್ಪ್ರಸಿದ್ಧವಾದ ಅರಸರಾಗಿದ್ದವರು,ಅಂತಹ ಮಹಾನ್ ಅರಸನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಮೂರ್ತಿ ಧೂಳು ಮಣ್ಣಿನಿಂದ ಕೊಳೆಯಾಗುತ್ತಿದೆ,ಆದರೆ ನಗರಸಭೆ ಮೂರ್ತಿ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ತೋರಿದೆ.ಈಗ ಜನೆವರಿ ೨೬ ರಂದು ಗಣರಾಜ್ಯೋತ್ಸವ ಆಗಮಿಸುತ್ತಿದೆ,ಇಂತಹ ಸಂದರ್ಭದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಮೂರ್ತಿ ಸ್ವಚ್ಛಗೊಳಿಸದಿರುವುದು ಬೇಸರದ ಸಂಗತಿಯಾಗಿದೆ.ಕೂಡಲೇ ನಗರಸಭೆಯಿಂದ ಮೂರ್ತಿ ಸ್ವಚ್ಛಗೊಳಿಸಬೇಕು ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ನಂತರ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಬರೆದ ಮನವಿಯನ್ನು ಪೌರಾಯುಕ್ತ ಜೀವನಕುಮಾರ ಕಟ್ಟಿಮನಿಯವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಚನ್ನಪ್ಪ ನಾಯಕ ದೇವಿಂದ್ರಪ್ಪ ಪತ್ತಾರ ಶಿವಲಿಂಗ ಹಸನಾಪುರ ಸಂಘದ ಅಧ್ಯಕ್ಷ ಅಬ್ದುಲ್ ರೌಫ್ ಉಪಾಧ್ಯಕ್ಷ ತಿಪ್ಪಣ್ಣ ಮಡಿವಾಳ ಅಬೀದ್ ಹುಸೇನ್ ಪಗಡಿ ಅಮಜಾದ್ ಹುಸೇನ್ ಆನಂದ ಕಟ್ಟಿಮನಿ ಖಾಜಾ ಅಜ್ಮೀರ್ ಮಹಿಬೂಬ ಪಟೇಲ್ ಸೇರಿದಂತೆ ಅನೇಕರಿದ್ದರು.