ಪತ್ರಕರ್ತ ಭೀಮಾಶಂಕರ ಸರಳ ಜೀವಿ: ಝಳಕಿ

0
43

ಕಲಬುರಗಿ: ವಿಜಯಪುರದ ಆಹೇರಿ ಯ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ಕೊಡಮಾಡುವ 2020 ನೇ ಸಾಲಿನ ಪ್ರತಿಷ್ಠಿತ ಬಸವರತ್ನ ರಾಷ್ಟ್ರೀಯ ಪ್ರಶಸ್ತಿ ಗೆ ಭಾಜನರಾದ ಕಲಬುರಗಿ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಭೀಮಾಶಂಕರ ಫಿರೋಜಾಬಾದ ಅವರಿಗೆ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ರಾಷ್ಟ್ರೀಯ ವಕ್ತಾರ, ನ್ಯಾಯವಾದಿ ವೈಜನಾಥ ಝಳಕಿ ಮಾತನಾಡಿ, ಅತಿ ಸರಳ ಪತ್ರಕರ್ತರೊಬ್ಬರಲ್ಲಿ ಭೀಮಾಶಂಕರ ಅವರೊಬ್ಬರು. ಅತ್ಯಂತ ಕ್ರೀಯಾಶೀಲ, ಸೌಮ್ಯ ಸ್ವಭಾವದಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ತಮ್ಮ ವರದಿಗಾರಿಕೆಯಿಂದಲೇ ಹೆಚ್ಚು ಸಮಸ್ಯೆ ಗಳ ಮೇಲೆ ಬೆಳಕು ಚೆಲ್ಲಿ ಪರಿಹರಿಸುವ ಕೆಲಸ ಮಾಡಿದ್ದಾರೆ, ಅವರ ನಿಸ್ವಾರ್ಥ, ಪ್ರಾಮಾಣಿಕತೆ ಗೆ ಇನ್ನೂ ಹೆಚ್ಚೆಚ್ಚು ಪ್ರಶಸ್ತಿ ಪುರಸ್ಕಾರ ಲಭಿಸಲಿ ಎಂದು ಹಾರೈಸಿದರು. ಇಂದಿನ ಯುವ ಪತ್ರಕರ್ತ ರಿಗೂ ಮಾದರಿ ಆಗಿದ್ದಾರೆ. ದೇವರು ಇವರಿಗೆ ಆಯುರೋಗ್ಯ ಕೊಟ್ಟು ಕಾಪಾಡಲೆಂದು ಶುಭ ಕೋರಿದರು.

Contact Your\'s Advertisement; 9902492681

ರೈತ ಮುಖಂಡ ಶ್ರೀಮಂತರಾವ ಪಾಟೀಲ್ ಭೂಸನೂರ ಮಾತನಾಡಿ, ಕ್ರಿಯಾಶೀಲತೆ, ಸತತ ಪರಿಶ್ರಮದಿಂದ ಉನ್ನತ ಸ್ಥಾನ ಪಡೆಯಲು ಸಾಧ್ಯ. ಯುವ ಜನಾಂಗ ಹೊಸ ಹೊಸ ವಿಷಯಗಳ ಬಗ್ಗೆ ಸಂಶೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಲಕ್ಷ್ಮಿ ಕಾಂತ ಪಾಟೀಲ್ ರೇವೂರ, ಶರಣಬಸವೇಶ್ವರ ದೇವಸ್ಥಾನದ ಅರ್ಚಕ ರಾಜಕುಮಾರ ಲಿಂಗಶೆಟ್ಟಿ,  ಖೇಮಲಿಂಗ, ಚಂದ್ರು ಹಿರೇಮಠ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here