ಕಲಬುರಗಿ: ಐವಾನ್-ಏ-ಶಾಹಿ ಅತಿಥಿಗೃಹದಲ್ಲಿ ವಿಭಾಗ ಮಟ್ಟದ ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಸಂಘವನ್ನು ರಾಜ್ಯ ಸಂಘ ಅಧ್ಯಕ್ಷರಾದ ಅಶೋಕ ರೆಡ್ಡಿ ರವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಸಂಘದ ಅಧ್ಯಕ್ಷರಾದ ಸುಭಾಷ ರವರು ವಹಿಸಿದರು. ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಸಂಘ ದ ಸಂಚಾಲಕರಾದ ತೈಯಬ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರಿಗೆ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘವು ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರಿಗೆ ನ್ಯಾಯಯುತವಾಗಿ ದೊರೆಯ ಬೇಕಾಗಿರುವ ಸೇವಾ ಸವಲತ್ತುಗಳನ್ನು ದೊರಕಿಸಿಕೊಡಲು ಸದಾ ದುಡಿಯುತ್ತಾ ಇರುತ್ತದೆ ಎಂದರು.
ಈ ಕಾರ‍್ಯಕ್ರಮದ ಉದ್ಘಾಟಕರಾದ ಅಶೋಕ ರೆಡ್ಡಿ ರವರು ಮಾತನಾಡುತ್ತಾ, ಸಂಘಟನೆಯಲ್ಲಿ ಬಲ ಇರುತ್ತದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಸಂಘ ಸ್ಥಾಪಿಸಿದ್ದು ಶ್ಲಾಘನೀಯ ಕಾರ‍್ಯ. ಈ ಸಂಘಕ್ಕೆ ರಾಜ್ಯ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಸಂಘ ಬೆಂಗಳೂರು ಸದಾ ಬೆಂಬಲವಾಗಿರುತ್ತದೆ ಎಂದು ಹೇಳಿದರು.
ಇದರಿಂದ ಎಲ್ಲಾ ಲಿಪಿಕ ನೌಕರರು ಸೌಹಾರ್ದಯುತವಾಗಿ ಕರ್ತವ್ಯ ನಿರ್ವಹಿಸಲು ಸಾದ್ಯವಾಗುತ್ತದೆ ಎಂದು ಹೇಳಿದರು. ಕಾರ‍್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕದ ತೋಟಗಾರಿಕೆ ಇಲಾಖೆಯ ಲಿಪಿಕ ನೌಕರರ ಸಂಘದ ಗೌರವ ಅಧ್ಯಕ್ಷರಾದ ಬಾಭುರಾವ ಗುನ್ನಳ್ಳಿ, ಉಪಾಧ್ಯಕ್ಷರುಗಳಾದ ರವಿಕಾಂತ ಮೇತ್ರೆ, ರವಿಂಧ್ರ ಧನ್ನೂರೆ, ಶ್ಯಾಮಸುಂದರ, ಎರ್ರಿ ಸ್ವಾಮಿ ಜೊತೆ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು. ಕಾರ‍್ಯಕ್ರಮದಲ್ಲಿ ಸಂಘದ ಸಂಘಟನಾ ಕಾರ‍್ಯದರ್ಶಿಗಳಾದ ಸಂಜೀವರೆಡ್ಡಿ ರವರು ಸ್ವಾಗತಿಸಿದರೆ, ಮಲ್ಲಪ್ಪ ರವರು ನಿರೂಪಣೆ ಮಾಡಿದರು, ಸಂಘದ ಖಜಾಂಚಿಯಾದ ಶೈಲ್ ರವರು ವಂದಿಸಿದರು.