ರೈತರ ಪರ ಕಾಳಜಿ ಇದ್ರೆ ಕಾಯಿದೆ ವಾಪಸ್ ಪಡೆಯಿರಿ: ಶಾಸಕ ಅಜಯ್ ಸಿಂಗ್ 

0
31

ಕಲಬುರಗಿ: ದೇಶದಲ್ಲಿ ಇಂದು ನಡೆಯುತ್ತಿರುವ ಹೋರಾಟವು 2ನೇ ಸ್ವಾತಂತ್ರ್ಯ ಹೋರಾಟದಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿಯಾಗಿವೆ. ಬಂಡವಾಳಶಾಹಿಗಳ ಪರವಾಗಿರುವ ಈ ಸರ್ಕಾರಗಳು ರೈತವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಬಂಡವಾಳಶಾಹಿಗಳಿಗೆ ಅನುಕೂಲಕ್ಕಾಗಿ ಕೆಲಸ ಮಾಡುತ್ತಿವೆ. ರೈತರ ಹೆಸರಿನ ಮೇಲೆ ಶಾಲು ಹಾಕಿಕೊಂಡು ರೈತವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬಗ್ಗೆ ಮಾತನಾಡಲು ಬಿಜೆಪಿ ಸರ್ಕಾರಕ್ಕೆ ಯಾವುದೇ ನೈತಿಕತೆಯಲ್ಲ. ರೈತರ ಕಾಳಜಿ ಬೇಕಾಗಿದ್ದರೆ ಕೂಡಲೇ ಮೂರು ಕೃಷಿಮಮಸೂದೆಗಳನ್ನು ಹಿಂಪಡೆಯಬೇಕೆಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಮಂಗಳವಾರ ನಡೆದ ಕಿಸಾನ್ ಸಂಯುಕ್ತ ರಂಗದ ಟ್ರಾಕ್ಟರ್ ಪರೇಡ್, ಜನತಾ ಪರೇಡ್‍ನಲ್ಲಿ ಇಡೀ ದಿನ ಪಾಲ್ಗೊಂಡು ಮಾತನಾಡಿದ ಅವರು ರೈತರ ಹೆಸರಲ್ಲಿ ಮೊಸಳೆ ಕಣ್ಣೀರು ಹಾಕಿದರೆ ಸಾಲದು. ನಿಜವಾಗಿಯೂ ರೈತರಿಗೆ ನೆರವು ನೀಡಬಲ್ಲಂತಹ ಕಾಯಿದೆಗಳನ್ನು ಜಾರಿಗೆ ತರಬೇಕು. ಏಕಮುಖವಾಗಿ ಕಾಯಿದೆ ಜಾರಿಗೆ ತರದೆ, ಸದನದಲ್ಲಿ ಚರ್ಚಿಸಿ, ಲೋಕ ತಂತ್ರ ಪದ್ಧತಿಯಂತೆಯೇ ಕಾನೂನು ಜಾರಿಗೊಳ್ಳಬೇಕು. ಂದಾಗ ಮಾತ್ರ ರೈತರ ನಿಜವಾದ ಕಲ್ಯಾಣವಾಗುತ್ತದೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ನೆಹರು ಗಂಜ್‍ನಲ್ಲಿಯೇ ಟ್ರಾಕ್ಟರ್ ಹತ್ತಿದ ಡಾ. ಅಜಯ್ ಸಿಂಗ್ ಅಲ್ಲಿಂದ ಸರ್ದಾರ್ ಪಟೇಲ್ ವೃತ್ತ, ಡಿಸಿ ಕಚೇರಿವರೆಗಿನ ಟ್ರಾಕ್ಟರ್ ರ್ಯಾಲಿ, ಜನತಾ ಪರೇಡ್‍ನಲ್ಲಿ ಎಲ್ಲಾ ರೈತ ಹೋರಾಟಗಾರರು, ಕಾಂಗ್ರೆಸ್ ಮುಖಂಡರುಗಳ ಜೊತೆ 4 ಗಂಟೆಗಳ ಕಾಲ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here