ಕಲಬುರಗಿ: ಭಾರತ ಮಾತೆಯ ಪವಿತ್ರವಾದ ಈ ಮಣ್ಣಿಗಾಗಿ, ಭಾರತಿಯರ ಸ್ವಂತತ್ರ್ಯಕ್ಕಾಗಿ, ಭಾರತೀಯರ ಮೇಲೆ ಪರಕೀಯರ ದೌರ್ಜನ್ಯ ಶಮನಕ್ಕಾಗಿ, ತಾಯಿ ಭಾರತೀಯಳಿಗೆ ತನ್ನ ಪ್ರಾಣವನ್ನೆ ಮುಡಿಪಾಗಿಟ್ಟ ಸಂಗೋಳ್ಳಿ ರಾಯಣ್ಣನನ್ನು ಸ್ಮರಿಸುವುದಾದರೆ ಇಂದು ನಾವು ದೇಶದೋಳಗಿನ ನಂಬಿಕೆ ದೇಶದ್ರೋಹಿಗಳ ಸಂಹಾರವಾಗಬೇಕು, ಇದು ಕ್ರಾಂತಿವೀರ, ವೀರಸುಪುತ್ರ ಸಂಗೋಳ್ಳಿ ರಾಯಣ್ಣನ ಗುರಿಯಾಗಿತ್ತು ಎಂದು ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ರಾಜು ಎಮ್ ಹಿರೇಮಠ ಅವರು ಹೇಳಿದರು.
ಅವರು ಆಳಂದ ತಾಲೂಕಿನ ಗುಂಜಬಬಲಾದದಲ್ಲಿ ನಡೆದ ಸಂಗೋಳ್ಳಿ ರಾಯಣ್ಣ ಹುತಾತ್ಮ ದಿವಸದ ಅಥಿತಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, ಭಾರತಿಯರು ಯಾವುದೆ ಆಸೆಗೆ ಒಳಪಡದೆ ಭಾರತ ಮಾತೆಯ ರಕ್ಷಣೆಗೆ ನಾವೆಲ್ಲರೂ ಬದ್ದರಾಗಬೇಕು, ಈ ದೇಶದ ವಿಷಯಕ್ಕೆ ಬಂದಾಗ ನಾವೆಲ್ಲಾ ಹೋರಾಟಕ್ಕೇ ಸಿದ್ದರಾಗಬೇಕು, ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕೆಂಬ ಸಂಗೋಳ್ಳಿ ರಾಯಣ್ಣನ ಕನಸ್ಸನ್ನು ನಾವೆಲ್ಲಾ ಭಾರತೀಯರು ನನಸಾಗಿಸಬೇಕು.
ನಂಬಿಕೆ ಇಟ್ಟ ಭಾರತೀಯರನ್ನು ದ್ರೋಹ ಬಗೆದ ದೇಶದ್ರೋಹಿಗಳನ್ನು ಸಂಹಾರಗೈಯಬೇಕೆಂಬ ಸಂಗೋಳ್ಳಿ ರಾಯಣ್ಣ ಕನಸ್ಸನ್ನು ನಾವೆಲ್ಲಾ ಭಾರತೀಯರು ದೃಡ ಸಂಕಲ್ಪದೊಂದಿಗೆ ನನಸು ಮಾಡುವ ಗುರಿ ನಮ್ಮಲ್ಲಿರಬೇಕೆಂದು ರಾಯಣ್ಣನ ಕನಸ್ಸನ್ನು ಸ್ಮರಿಸಿ ಮಾತನಾಡಿ, ಹಳ್ಳಿಯ ಸರ್ವಾಂಗೀಣ ಅಭಿವೃದ್ದಿ ಸಂಗೋಳ್ಳಿ ರಾಯಣ್ಣನ ಕನಸ್ಸಾಗಿತ್ತು, ಹಳ್ಳಿಯಲ್ಲಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ದೊರೆಯಬೇಕು ಭೇಧಭಾವ ಹೊಡೆದು ಹಾಕಿ ಸ್ವೇಹಭಾರತ ಕಟ್ಟಬೇಕು, ನಮ್ಮ ನಮ್ಮವರನ್ನು ಒಡೆದು ಆಳುವವರನ್ನು ದೇಶದಿಂದ ಹೊಡೆದೊಡಿಸಬೇಕು, ಭಾರತೀಯರು ನಾವು ನಮ್ಮ ಭೂಮಿ ತಾಯಿಗಾಗಿ ನಮ್ಮ ಪ್ರಾಣ ಕೊಡುವ ಸಂಧರ್ಭ ಎದುರಾದರು ಹಿಂದೆ ಸರಿಯದೆ ನಮ್ಮ ದೇಶದ ರಕ್ಷಣೆ, ನಮ್ಮವರ ರಕ್ಷಣೆಗೆ ಮುಂದೆ ಬರಬೇಕಾದರೆ ದೇಶಕ್ಕಾಗಿ ಪ್ರಾಣಕೊಟ್ಟ ವೀರ ಯೋಧರ, ದೇಶಭಕ್ತರ ಜೀವನ ಚರಿತ್ರೆ ಓದಬೇಕೆಂದು ಯುವಕರಿಗೆ, ನಾಗರೀಕರಿಗೆ ರಾಜು ಹಿರೇಮಠ ಅವರು ಕರೆ ಕೊಟ್ಟರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ರಾಘವೆಂದ್ರ ಕುಲಕರ್ಣಿಯವರು ಮಾತನಾಡಿ, ಸಂಗೋಳ್ಳಿ ರಾಯಣ್ಣ ಬರೀ ಕ್ರಾಂತಿಯಲ್ಲಾ ಅವನು ಈ ದೇಶಕ್ಕೆ ಒಂದು ಮರೆಯದ ಶಕ್ತಿ, ಗಣರಾಜ್ಯೋತ್ಸವ ದಿನದಂದು ಸಂಗೋಳ್ಳಿ ರಾಯಣ್ಣ ಎಲ್ಲಾ ಪ್ರತಿಮೆಯ ಮೇಲೆ ದೇಶದ ಭಾವುಟ ಹಾರಾಡಲಿ ಎಂದು ಮಾತನಾಡುತ್ತಾ, ಅವರು, ದೇಶಭಕ್ತರು ಒಂದು ವರ್ಗಕ್ಕೇ ಸೀಮಿತವಾಗಬಾರದು ಅವರು ನಾಡಿಗೆ, ದೇಶಕ್ಕೆ ಯುವ ದೇಶಾಭಿಮಾನಿಗಳಿಗೆ ಪ್ರೇರಣೆ ನೀಡಿದ ಅವರು, ಸಂಗೋಳ್ಳಿ ರಾಯಣ್ಣನ ದೇಶಾಭಿಮಾನ ನಾವೆಲ್ಲರೂ ಮರೆಯುವ ಹಾಗಿಲ್ಲಾ, ರಾಯಣ್ಣ ಹುಟ್ಟಿದರೆ ಸ್ವಂತತ್ರ್ಯ ದಿವಸ, ರಾಯಣ ಹುತಾತ್ಮನಾದರೆ ಗಣರಾಜ್ಯೋತ್ಸವ ದಿನ ಇದು ಭಾರತಿಯರಿಗೆ ಮರೆಯದ ದಿನಗಳೆಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಣಪತಿ ಜಮಾದರ ಅವರು ಮಾತನಾಡಿ ರಾಯಣ್ಣನ ಅಭಿಮಾನ ಇಂದಿಗೂ ಮುಂದೆಂದಿಗೂ ಭಾರತೀಯರ ಮನಸ್ಸಿನಲ್ಲಿ ಅಳಿಯದೆ ಅಜಾರಮರವಾಗಿ ಉಳಿಯಲಿದ್ದು, ರಾಯಣ್ಣ ಪ್ರತಿಮೆಗೆ ಬೇಕಾದ ಎಲ್ಲಾ ಸೇವೆಗೆ ಯುವಕರು ಒಗ್ಗಟ್ಟಿನ ಮೂಲಮಂತ್ರದೊಂದಿಗೆ ಕೈಜೋಡಿಸಬೇಕು, ಒಂದು ಕೈಯಿಂದ ಚಪ್ಪಾಳೆ ಹೊಡೆಯುವದಕ್ಕಿಂತ ಎಲ್ಲರು ಒಗ್ಗಟ್ಟಿನ ಮೂಲಮಂತ್ರದೊಂದಿಗೆ ಅಭಿವೃದ್ದಿಯತ್ತ ಚಿತ್ತ ಹರಿಸೋಣಾ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮೊದಲಿಗೆ ಕಾರ್ಯಕ್ರಮವನ್ನು ಸಂಗೋಳ್ಳಿ ರಾಯಣ್ಣ ಪ್ರತಿಮೇಗೆ ಮಾಲಾರಪಣೆ ಹಾಕಿ, ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಲಿ ತಾಲೂಕಾ ಪಂಚಾಯತ ಸದಸ್ಯರಾದ ಲಕ್ಷ್ಮಿಪುತ್ರ ಯಂಕಂಚಿ, ಗ್ರಾಮಪಂಚಾಯತ ಸದಸ್ಯರಾದ, ರಾಜಕುಮಾರ ಮರಡಿ, ಶ್ರೀಶೈಲ ನವಲೆ, ಜಗು ಎಸ್ ಯಂಕಂಚಿ, ಸರಕಾರಿ ಪ್ರೌಡ ಶಾಲಾ ಶಿಕ್ಷಕರಾದ ಮಹಮದ್ದ್ ರಫೀಕ್, ಕ್ಷ್ಮೀಕಾಂತ ಸರ್ ಗ್ರಾಮಸ್ಥಾರಾದ ಶಿವರಾಜ ಪಾಟಿಲ್, ಸಾಗರ ಕೋರೆ, ಲಕ್ಷ್ಮಿಪುತ್ರ ನರೋಣಾ, ಸಂಗು ವಾಗ್ದರ್ಗಿ,ರಾಜು ಮರಡಿ, ಲೋಕೇಶ ಮರಡಿ, ಯುವರಾಜ ಮರಡಿ, ಸಿದ್ದು ಭೋಧನ, ಕ್ಷೇಮಲಿಂಗ ಭೋಧನ, ಲಕ್ಷ್ಮಿಪುತ್ರ ಜಮಾದರ, ಶ್ರೀನಾಥ ಜಮಾದರ,ಮಲ್ಲು ಹೂಗಾರ,ಚಂದ್ರು ಮಾಲಕರು, ಕಂಠೀವ ಮಾಲಕರು. ಮುಂತಾದ ಯುವಕರು ರಾಯಣ್ಣ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.