ವಡ್ಡನಕೇರಿ ಪ್ರತಿಷ್ಠಾನದ ಅವ್ವ ಪ್ರಶಸ್ತಿ ಪ್ರದಾನ

0
74

ಕಲಬುರಗಿ: ಇಲ್ಲಿನ ಕಲಾಮಂಡಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಕೊಡಮಾಡುವ ನಾಲ್ಕನೇ ವರ್ಷದ 2019 ನೇ ಸಾಲಿನ `ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ರಾಜೇಂದ್ರ ಯರನಾಳೆ, ಪ್ರಶಸ್ತಿ, ಸನ್ಮಾನಗಳಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಎತ್ತರಕ್ಕೆ ಬೆಳೆಯಲು ಸಾಧ್ಯ, ಜನರ ಮೆಚ್ಚುಗೆ ಪಾತ್ರವಾಗಲಿದ್ದಾರೆ ಎಂದರು.

Contact Your\'s Advertisement; 9902492681

ಇದೇ ವೇಳೆಗೆ ಕೋಲಾರದ ನ.ಗುರುಮೂರ್ತಿಯವರ `ಅರ್ಜಿ ಹಾಕಿ ಹುಟ್ಟಿದವರ ನಡುವೆ’ (ಕವನಸಂಕಲನ), ಗೋಕಾಕದ ಶಕುಂತಲಾ ಹಿರೇಮಠ ರವರ `ರೆಕ್ಕೆ ಬಲಿತ ಹಕ್ಕಿ’ (ಕಥಾಸಂಕಲನ), ಹುಮನಾಬಾದಿನ ಡಾ. ಜಯದೇವಿ ಗಾಯಕವಾಡ್ ರವರ `ಹಾಯಿಕುಗಳು’ ಕೃತಿಗೆ ಅವ್ವ ಪ್ರಶಸ್ತಿಯನ್ನು ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು.

ವೈದ್ಯಕೀಯ ಸಾಹಿತ್ಯದಲ್ಲಿ ಡಾ. ಎಸ್. ಎಸ್. ಗುಬ್ಬಿ, ರಂಗಭೂಮಿಯಲ್ಲಿ ಸುಬ್ಬರಾವ ಕುಲಕರ್ಣಿ ಮತ್ತು ಪೆÇ್ರ. ಶಂಕರಲಿಂಗ ಹೆಂಬಾಡಿಯವರ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ  2019 ನೇ ಸಾಲಿನ `ಅವ್ವ ಗೌರವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆಗೆ ಅವ್ವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಪ.ಮಾನು ಸಾಗರ, ಭೀಮಾಶಂಕರ ಫಿರೋಜಾಬಾದ್, ಡಾ. ನಾಗಪ್ಪ ಗೋಗಿ ಅವರನ್ನು ಸತ್ಕರಿಸಲಾಯಿತು.

ಬೆಂಗಳೂರಿನ ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ, ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ್, ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಮಾತನಾಡಿದರು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬಸವರಾಜ್ ಎಸ್. ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ವೇದಿಕೆ ಮೇಲೆ ಮುದ್ರಣ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀನಾರಾಯಣ ಇದ್ದರು.

ಪ್ರತಿಷ್ಠಾನದ ಕಾರ್ಯದರ್ಶಿ ಶ್ವೇತಾ ಎಸ್. ವಡ್ಡನಕೇರಿ, ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಉಪನಿರ್ದೇಶಕ ಡಾ. ಅಜಯಕುಮಾರ ಡಿ, ಶರಣಗೌಡ ಪಾಟೀಲ್, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಶಿವರಂಜನ ಸತ್ಯಂಪೇಟ, ಮಹಿಪಾಲರಡ್ಡಿ ಮುನ್ನೂರ್, ಡಾ. ಗವಿಸಿದ್ದಪ್ಪ ಪಾಟೀಲ್, ಶಿವರಾಜ್ ಅಂಡಗಿ, ಕಲ್ಯಾಣರಾವ್. ಡಾ. ಚಿ.ಸಿ. ನಿಂಗಣ್ಣ, ಶಂಕರಯ್ಯ ಸ್ವಾಮಿ ಹಿರೇಮಠ, ಕಾಶೀಬಾಯಿ, ವಿಶ್ವನಾಥ ಹರಕಂಚಿ ಅನೇಕ ಸಾಹಿತಾಸಕ್ತರು ಭಾಗವಹಿಸಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಡಾ. ಶರಣಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಚ್. ನಿರಗುಡಿ ನಿರೂಪಿಸಿದರು. ಡಾ. ನಾಗಪ್ಪ ಗೋಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here