ಎನ್‍ಇಕೆಎಸ್‍ಆರ್‍ಟಿಸಿ ಮೊಬೈಲ್ ಗ್ರಂಥಾಲಯ, ಸಂಚಾರಿ ಸಭಾ ವಾಹನಕ್ಕೆ ಚಾಲನೆ

0
19

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2025ಕ್ಕೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಜನಸ್ನೇಹಿ-ಪರಿಸರಸ್ನೇಹಿ ಸಾರಿಗೆಯನ್ನು ಪರಿಚಯಿಸುವುದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.

ಬುಧವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಕಲಬುರಗಿಯಿಂದ ನಡೆದ “ರಸ್ತೆ ಸುರಕ್ಷತೆ – ಜೀವನ ರಕ್ಷೆ” ಘೋಷ ವಾಕ್ಯದೊಂದಿಗೆ (ಜನವರಿ 18 ರಿಂದ ಫೆಬ್ರವರಿ 17ರವರೆಗೆ) ರಸ್ತೆ ಸುರಕ್ಷತೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಂಯೋಗದೊಂದಿಗೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಸಂಚಾರಿ ಗ್ರಂಥಾಲಯವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದು, ಗ್ರಂಥಗಳ ಮೂಲಕ ಇಡೀ ಜಗತ್ತನೇ ತೋರಿಸುವ ಪ್ರಯತ್ನ ಮಾಡಲಿದ್ದೇವೆ. 5 ಲಕ್ಷಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಮುಂದಿನ ದಿನಗಳಲ್ಲಿ ಇರಿಸಲಾಗುವುದು. ಇದರ ಸದುಪಯೋಗ ಸಾರಿಗೆ ಸಿಬ್ಬಂದಿಗಳು, ಸಾರ್ವಜನಿಕರು ಸೇರಿ ಎಲ್ಲರೂ ಪಡೆಯಬೇಕು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮುಂಬರುವ ದಿನಗಳಲ್ಲಿ ಸಂಚಾರಿ ಗ್ರಂಥಾಲಯಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಲಾಕ್‍ಡೌನ್ ಸಮಯದಲ್ಲಿ ಸಂಸ್ಥೆಯು ಸಾಕಷ್ಟು ಆರ್ಥಿಕ ನಷ್ಟ ಅನುಭವಿಸಿದೆ. ಆದರೂ ಸಹ ನಮ್ಮ ಸಿಬ್ಬಂದಿಗಳು ಹುಮ್ಮಸಿನಿಂದ ಕಾರ್ಯನಿರ್ವಹಿಸಿದ್ದಾರೆ. ಪ್ರತಿದಿನ 9 ಲಕ್ಷ 93 ಸಾವಿರ ಜನ ಈ.ಕ.ರ.ಸಾ. ಸಂಸ್ಥೆಯಲ್ಲಿ ಸಂಚರಿಸುತ್ತಾರೆ. ಅಂಬಿಗ ದಡ ಸೇರಿಸಿದಂತೆ ನಮ್ಮ ಸಾರಿಗೆ ನಿಮ್ಮ ಮನೆಬಾಗಿಲಿಗೆ ಸೇರಿಸುತ್ತದೆ ಎಂದು ಅವರು ಹೆಮ್ಮೆಯಿಂದ ನುಡಿದರು.

ಇದೇ ವೇಳೆ ಮಾತನಾಡಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಎಸ್. ಹೊಸಮನಿ ಅವರು, ಪುಸ್ತಕ ಸಂಸ್ಕøತಿ ಬೆಳೆಸುವ ನಿಟ್ಟಿನಲ್ಲಿ ಈ.ಕ.ರ.ಸಾ. ಸಂಸ್ಥೆಯು ರಾಜ್ಯದ ಇತರೆ ಸಂಸ್ಥೆಗಳಿಗೆ ಮಾದರಿಯಾಗಲಿದೆ. 6 ಜಿಲ್ಲೆಗಳಲ್ಲೂ ಒಂದೊಂದು ಸಂಚಾರಿ ಗ್ರಂಥಾಲಯ ನಿರ್ಮಿಸುವ ಇರಾದೆ ಇದೆ. ಸಾರಿಗೆ ಸಂಸ್ಥೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಅವರು ಆಶಯ ವ್ಯಕ್ತಪಡಿಸಿದರು.

ದೇಶದಲ್ಲಿಯೇ 2020 ಫೆಬ್ರುವರಿ 26 ರಿಂದ ಇಲ್ಲಿಯವರೆಗೆ 11.34 ಲಕ್ಷ ಪುಸ್ತಕಗಳನ್ನು 16 ಲಕ್ಷ ಬಾರಿ 4.30 ಲಕ್ಷ ಜನರು ಡಿಜಿಟಲ್ ಪೆÇೀರ್ಟಲ್ ಮೂಲಕ ಓದಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ 7 ಸಾವಿರ ಗ್ರಂಥಾಲಯಗಳಿವೆ. 30 ಜಿಲ್ಲಾ, 26 ನಗರ, 216 ತಾಲೂಕ ಸೇರಿ ಒಟ್ಟು 272 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯ ಮಾಡಲಾಗಿದೆ. ಇದರ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ ಕೋವಿಡ್ ಸಮಯದಲ್ಲಿ ಸ್ಫೂರ್ತಿಯಿಂದ ಕೆಲಸ ಮಾಡಿದ ಸಾರಿಗೆ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು.

ಸಂಚಾರಿ ಗ್ರಂಥಾಲಯ ವಾಹನಕ್ಕೆ ಹಸಿರು ನಿಶಾನೆ: ಕಾರ್ಯಕ್ರಮ ಉದ್ಘಾಟನೆಗಿಂತ ಮೊದಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಂಯೋಗದೊಂದಿಗೆ ಸಂಚಾರಿ ಗ್ರಂಥಾಲಯಕ್ಕೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಈ ಸಂಚಾರಿ ಗ್ರಂಥಾಲಯವು ನಗರದ ಹೆಚ್ಚಿನ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಪ್ರತಿದಿನ ಸಂಚರಿಸಲಿದೆ. ಸುಮಾರು 3000 ರಿಂದ 4000 ಕ್ಕಿಂತ ಹೆಚ್ಚಿನ ಪುಸ್ತಕಗಳು, ಮ್ಯಾಗಜಿನ್, ದಿನಪತ್ರಿಕೆಗಳನ್ನು ಇದರಲ್ಲಿ ಇರಿಸಲಾಗಿದೆ. ಟೇಬಲ್, ಕುರ್ಚಿ, ಫ್ಯಾನ್, ಲೈಟ್, ಸಿಸಿಟಿವಿ ಸೇರಿದಂತೆ ಆಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಚಾರಿ ಸಭಾ ವಾಹನಕ್ಕೂ ಚಾಲನೆ: ಬೀದರ ಜಿಲ್ಲಾಡಳಿತ ಕೊಡುಗೆ ನೀಡಿರುವ ಸಂಚಾರಿ ಸಭಾ ವಾಹನವನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂಚಾರಿ ಸಭಾ ವಾಹನ ಸಚಿವರು, ಶಾಸಕರು, ಹಾಗೂ ಅಧಿಕಾರಿಗಳ ತುರ್ತುಸಭೆ ಮಾಡಲು ಅವಕಾಶ ನೀಡಲಾಗುವುದು. 12 ಆರಾಮದಾಯಕ ಆಸನಗಳು, 8 ಅಡಿ ಉದ್ದನೆಯ ಕಾನ್ಫರೆನ್ಸ್ ಹಾಲ್ ವ್ಯವಸ್ಥೆ ಇರುತ್ತದೆ. ಸಭೆ ಜರುಗಿಸಲು ಪೆÇ್ರಜೆಕ್ಟರ್, ಮೈಕ್, ಸ್ಪೀಕರ್, ಎಲ್.ಇ.ಡಿ. ಲೈಟಿಂಗ್, ಸಿಸಿಟಿವಿ ಸೇರಿದಂತೆ ಹವಾನಿಯಂತ್ರಣ ಹಾಗೂ ಬಯೋ ಟಾಯ್ಲೆಟ್ ಕೂಡ ಸಿದ್ದಪಡಿಸಲಾಗಿದೆ. ಮುಂಗಡ, ಕಾಯ್ದಿರುವಿಕೆ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದರು.

ಅಪಘಾತ ರಹಿತ ಚಾಲಕರಿಗೆ ಸನ್ಮಾನ : ಈ ಸಂದರ್ಭದಲ್ಲಿ ಸುಮಾರು 35 ವರ್ಷಗಳ ಕಾಲ ಅಪಘಾತರಹಿತ ಚಾಲನೆ ಮಾಡಿ ಸೇವೆ ಸಲ್ಲಿಸಿ ನಿವೃತ್ತರಾದ 29 ಸಾರಿಗೆ ಚಾಲಕರಿಗೆ ಸನ್ಮಾನ ಮಾಡಲಾಯಿತು.

ಪಿ.ಸಿ.ಆರ್.ಎ ಪುರಸ್ಕಾರ ಪ್ರಧಾನ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂರು ವಿಭಾಗಗಳಾದ ಗುರುಮಿಠಕಲ್, ಶಹಾಪುರ, ಕಲಬುರಗಿಯ ವಿಭಾಗ-4 ಹೆಚ್ಚಿನ ಇಂಧನ ಉಳಿಸಿ ಲಾಭದಾಯಕ ಕಾರ್ಯ ನಿರ್ವಹಣೆ ಮಾಡಿದಕ್ಕೆ ಪೆಟ್ರೋಲ್ ಸಂರಕ್ಷಣಾ ಸಂಶೋಧನಾ ಸಂಸ್ಥೆ (ಪಿ.ಸಿ.ಆರ್.ಎ.) ವತಿಯಿಂದ ಪುರಸ್ಕಾರ ಪ್ರಧಾನ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸರ್ಕಾರದ ಆದೇಶದ ಮೇರೆಗೆ ಸೇವಾ ಸಿಂಧೂ ಅರ್ಜಿ ಮೂಲಕ ವಿದ್ಯಾರ್ಥಿಗಳಿಗೆ ಕೌಂಟರ್ ಹತ್ತಿರ ಸರತಿ ಸಾಲಿನಲ್ಲಿ ಬಸ್‍ಪಾಸ್‍ಗಳನ್ನು ನೀಡಲಾಗುತ್ತಿದೆ. ಇಂದು ಸಾಂಕೇತಿಕವಾಗಿ ಓರ್ವ ವಿದ್ಯಾರ್ಥಿಗೆ ಪಾಸ್ ನೀಡಿ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹನುಮಂತರಾಯ ಮಲಾಜಿ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಯಾನಂದ ಧಾರವಾಡಕರ್, ಈ.ಕ.ರ.ಸಾ. ಸಂಸ್ಥೆಯ (ನಾಮನಿರ್ದೇಶಿತ) ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಲಿನ್ ಅತುಲ್, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಅಪರಾಧ ವಿಭಾಗದ ಪೆÇಲೀಸ್ ಅಧಿಕಾರಿ ಶ್ರೀಕಾಂತ್ ಕಟ್ಟಿಮನಿ, ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಅಜಯಕುಮಾರ್, ಮುಖಂಡ ಸಿದ್ದಾಜೀ ಪಾಟೀಲ್, ಸಾರಿಗೆ ಇಲಾಖೆಯ ವಿಭಾಗ-1ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವ್ಹಿ.ಹೆಚ್. ಸಂತೋಷಕುಮಾರ, ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ಹೀರಾ ಮುಂತಾದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here