ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ

0
112

ಶಹಾಬಾದ್: ಕ್ಷಯರೋಗಿಗಳು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿಕೊಳ್ಳುವದರ ಜೊತೆಗೆ ಪೌಷ್ಟಿಕ ಆಹಾರಯುಕ್ತ ಸೇವನೆ ಬಹಳ ಮುಖ್ಯ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ, ಎಂದು ಮುಖ್ಯ ಅತಿಥಿಗಳಾದ ತಾಲ್ಲೂಕಾ ವೈದ್ಯಾಧಿಕಾರಿಗಳಾದ ಡಾ ಅಬ್ದುಲ್ ರಹೀಮ್ ವರು ಮಾತನಾಡುತ್ತಾ ಸೋಂಕಿತ ವ್ಯಕ್ತಿ ಕ್ಷಯಮುಕ್ತ ವ್ಯಕ್ತಿಯಾಗಿ ಮಾದರಿ ಅಗಬೇಕು ಆರೋಗ್ಯ ವಂತ ಜೀವನ ನಡೆಸುವಂತಹ ಬೆಳವಣಿಗೆ ರೂಢಿಸಿಕೊಳ್ಳಬೇಕು ಹಾಗೆ ಮುಂಜಾಗ್ರತಾ ಕ್ರಮ ವಹಿಸುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.

ಸರ್ಕಾರಿ ತಾಲ್ಲೂಕು ಸಾರ್ವಜನಿಕರ ಆಸ್ಪತ್ರೆ ಪ್ರಾರಂಗದಲ್ಲಿ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕಲಬುರಗಿ. ತಾಲ್ಲೂಕು ಸರ್ಕಾರಿ ಆಸ್ಪತ್ರೆ ಶಾಹಾಬಾದ್. ಮತ್ತು ಜಿ99 . ಜಿ55 ಗೆಳೆಯರ ಬಳಗ ಕಲಬುರಗಿ ಹಾಗೂ ಸಾಕ್ಷಮ್ ಪ್ರವಾಹ ಕಾರ್ಯಕ್ರಮ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಕಲಬುರಗಿ . ಇವರ ಸಂಯುಕ್ತಶ್ರಾಯದಲ್ಲಿ.

Contact Your\'s Advertisement; 9902492681

ಕ್ಷಯರೋಗಿಗಳಿಗೆ ಪೌಷ್ಟಿಕಾಹಾರ ಪೌಡರ್ ವಿತರಿಸಿ ಮಾತನಾಡತ್ತ ಈ ಪೌಷ್ಟಿಕ ಪೌಡರ್ ನೀಡಿದ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರರ ಟ್ರಸ್ಟ್ , ಜಿ99 ,ಜಿ,55 ಗೆಳೆಯರ ಬಳಗಕ್ಕೆ ಧನ್ಯವಾದಗಳು ತಿಸಿದರು.

ನಂತರ ಮುಖ್ಯ ಅತಿಥಿ ವಹಿಸಿದ ಸಕ್ಷಮ್ ಪ್ರವಾಹ ಕಾರ್ಯಕ್ರಮ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ( ಟಿ,ಐ,ಎಸ್,ಎಸ್ ) ವಲಯ ಕಾರ್ಯಕ್ರಮ ಅಧಿಕಾರಿ ಅಬ್ದುಲ್ ಶಫಿ ಅಹ್ಮದ್ ಅವರು ವೇದಿಕೆ ಮೇಲೆ ಮಾತನಾಡುತ್ತ ಕ್ಷಯರೋಗ ಹರಡುವ ಲಕ್ಷಣ ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಹರಡುವ ಒಂದು ಸೋಂಕು. ಎರಡೂ ವಾರಕಿಂತ ಹೆಚ್ಚು ಕೆಮ್ಮು. ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಫದಲ್ಲಿ ರಕ್ತ ಬಿಳುವುದು. ತೂಕ ಕಡಿಮೆ ಅಗುವುದು. ರಾತ್ರಿ ಹೊತ್ತು ಜ್ವರ, ಬೆವರುವಿಕೆ. ಹಸಿವು ಅಗದಿರುವುದು. ಸೋಂಕಿತರಿಗೆ ತಮ್ಮ ಮನೆಯಲ್ಲಿ ಇರುವ ಆರೈಕೆದಾರು ಜಗೃತೆಯಿಂದ ಎಚ್ಚರವಹಿಸಿ ಆರೈಕೆ ಮಾಡಬೇಕು ಹಾಗೆ , ಕ್ಷಯರೋಗದ ಬಗ್ಗೆ ಭಯ ಪಡುವ ಅಗತ್ಯ ವಿಲ್ಲ. ನಿರಂತರ ಆರು ತಿಂಗಳು ಔಷಧಿ ಸೇವಿಸುವುದರಿಂದ ರೋಗ ಪೂರ್ಣ ಗುಣಮುಖ ವಾಗುತ್ತದೆ ಎಂದರು. ಮಧ್ಯದಲ್ಲಿ ಔಷಧ ಸೇವಿಸುವುದನ್ನು ರೋಗಿಯು ಬಿಟ್ಟರೆ ರೋಗ ಮತ್ತಷ್ಟು ಉಲ್ಬಣನವಾಗುತ್ತದೆ ಒಂಬತ್ತು ತಿಂಗಳಯಿಂದ ಎರಡು ವರ್ಷಗಳ ವರೆಗೆ ( ಡ್ರಗ್ ರೆಜಿಸ್ಟೆಂಟ್ ಟಿಬಿ ) ಮಾತ್ರೆ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿರಂತರ ಸೇವಿಸಬೇಕು. ಕ್ಷಯರೋಗ ಸಂಬಧಿಸಿದ ಚಿಕಿತ್ಸೆ ಮತ್ತು ಔಷಧಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಕ್ಷಯರೋಗಿಗಳು ಕೂಡ ಬಹಳ ಜಾಗ್ರತೆ ವಹಿಸಬೇಕು ತಪ್ಪದೆ ಮಾಸ್ಕ್ ಧರಿಸಬೇಕು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಆಗಾಗ ಸಾಬೂನಿನಿಂದ , ಕೈ ತೊಳೆದಕೊಂಡಲ್ಲಿ ಮಾತ್ರ ಕೊರೊನಾ ದಿಂದ ದೂರವಿಡಲು ಸಾಧ್ಯ ಎಂದು ಹೇಳಿದರು.

ವೇದಿಕೆ ಮೇಲೆ ಮುಖ್ಯ ಅತಿಥಿಗಳಾದಂತ ದಂತ ವೈದ್ಯರಾದ ಡಾ ಸಂಧ್ಯಾ ಡಾಂಗೆ. ವೈದ್ಯರಾದ ಡಾ. ಶಂಕರ್, ಡಾ. ದಶರಥ ಜಿಗಾಡೆ, ತಾಲ್ಲೂಕ ಆಸ್ಪತ್ರೆಯ ಸುಪರಿಡೆಂಟ್ ಮೋಹನ್ ಗಾಯಕವಾಡ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಧ್ಯಕ್ಷತೆವಹಿಸಿದ ಹಿರಿಯ ಕ್ಷಯರೋಗ ಮೇಲ್ವಿಚಾರಕಿ ರಜನಿ ಟಿಲ್ಲೇ ವಹಿಸಿದ್ದರು.

ಕಿರಿಯ ಆರೋಗ್ಯ ಸಹಾಯಕ ಮಹಮ್ಮದ್ ಯೂಸುಫ್, ಆರ್ ಕೆ ಎಸ್ ಕೆ ಸಮಾಲೋಚಕ ಅಮರೇಶ ನಂದೂರು. ಇದ್ದರು. ಸಕ್ಷಮ್ ಪ್ರವಾಹ ಕಾರ್ಯಕ್ರಮ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ( ಟಿ,ಐ,ಎಸ್,ಎಸ್ ) ಜಿಲ್ಲಾ ಡಿಆರ್ ಟಿಬಿ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಸ್ವಾಗತಿಸಿ ನಿರೂಪಿಸಿದರು. ಯೂಸುಫ್ ವಂದಿಸಿದರು. ಕ್ಷಯರೋಗಿಗಳು ಮತ್ತು ಇತರೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here