ಬಾಬಾ ಸಾಹೇಬರನ್ನು ಅರ್ಥಮಾಡಿಕೊಳ್ಳದ ದಲಿತರಿಂದಲೂ ಸಮಾಜಕ್ಕೆ ಅಪಾಯವಿದೆ: ಡಾ. ಅಪ್ಪುಗೆರೆ

0
186

ಕಲಬುರಗಿ: ಸಂವಿಧಾನ ಜಾರಿಗೆ ಬಂದು 70 ವರ್ಷ ಕಳೆದರೂ ಸಹ ಜಾತಿವಾದಿಗಳ ಕುತಂತ್ರದಿಂದ ದಲಿತರು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಅಪ್ಪುಗೆರೆ ಸೋಮಶೇಖರ ವಿಷಾಧ ವ್ಯಕ್ತಪಡಿಸಿದರು.

ಯಡ್ರಾಮಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವ್ರತ್ತದಲ್ಲಿ ಏರ್ಪಡಿಸಿದ್ದ ಜೀ ವಾಹಿನಿಯ ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯದಲ್ಲಿ ಆಳ್ವಿಕೆ ಮಾಡಿದ ಯಾವ ಪಕ್ಷವೂ ಈ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಬಾಬಾ ಸಾಹೇಬರು ಈ ದೇಶದ ಎಲ್ಲ ಜನರಿಗೂ ಅನ್ವಯವಾಗುವಂತಹ ಸಂವಿಧಾನ ರಚಿಸಿದ್ದಾರೆ. ಆದರೆ ಕೆಲವು ಜಾತಿವಾದಿಗಳು ಕೇವಲ ಶೋಷಿತರಿಗಾಗಿ ಸಂವಿಧಾನ ಬರೆಯಲಾಗಿದೆ ಎಂದು ಬಿಂಬಿಸುತ್ತಿರುವುದು ದುರಂತ. ಬಾಬಾ ಸಾಹೇಬರಿಗೆ ಹಲವು ರೀತಿಯ ಅವಮಾನಗಳನ್ನು ನೀಡಲಾಗಿದೆ. ಆದರೂ ಸಹ ಈ ದೇಶದ ಜನ ಒಪ್ಪುವಂತಹ ಕೆಲಸ ಮಾಡಿದ್ದಾರೆ. ದೇಶದ ಜನ ಬಾಬಾ ಸಾಹೇಬರ ಚಿಂತನೆಗಳನ್ನು ಓದಬೇಕು. ಬಾಬಾ ಸಾಹೇಬರನ್ನು ಅರ್ಥಮಾಡಿಕೊಳ್ಳದ ದಲಿತರಿಂದಲೂ ಸಮಾಜಕ್ಕೆ ಅಪಾಯವಿದೆ ಎಂದರು. ದೇಶದ ಮಹಿಳೆಯರುˌ ಶೋಷಿತರು ಹಾಗೂ ಸರ್ವಜನ ಸುಖವಾಗಿ ಬಾಳುತ್ತಿರುವುದು ಬಾಬಾ ಸಾಹೇಬರ ಕೊಡುಗೆಯ ಫಲ ಎಂದರು.

ಈ ಸಂದರ್ಭದಲ್ಲಿ ಭಂತೇಜಿ ಧಮ್ಮನಾಗ ನಾಗಪುರˌ ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿˌ ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿˌ ಶಾಸಕ ಡಾ.ಅಜಯಸಿಂಗ್ˌ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳˌ ವಿಜಯ ಕೇದಾರಲಿಂಗಯ್ಯ ಹಿರೇಮಠˌ ಶಾಂತಗೌಡ ದುಮ್ಮದ್ರಿˌ ರಮೇಶ ಬಾಬು ವಕೀಲˌ ಜಿಪಂ ಸದಸ್ಯ ದಂಡಪ್ಪ ಸಾಹು ಕುರಳಗೇರಾˌ ಚಂದ್ರಶೇಖರ ಹರನಾಳˌ ಮರೆಪ್ಪ ಬಡಿಗೇರˌ ಹಯ್ಯಾಳಪ್ಪ ಗಂಗಾಕರˌಶಾಂತಪ್ಪ ಯಲಗೋಡˌ ಗುರಣ್ಣ ಕಾಚಾಪುರˌ ಡಾ.ಪ್ರಕಾಶ ಬಡಿಗೇರˌ ಗುರಣ್ಣ ಐನಾಪುರˌ ಡಾ.ಅಶೋಕ ದೊಡ್ಮನಿˌ ಬಸವರಾಜ ಕಲಕೇರಿˌ ಅಶ್ವಿನ ಶರ್ಮಾˌ ಗೊಲ್ಲಾಳಪ್ಪ ಗೆಜ್ಜಿˌ ಮಲ್ಲಿಕಾರ್ಜುನ ಯತ್ನಾಳˌ ಮಹೇಂದ್ರ ಬಾಲೂರˌ ಮಂಜುನಾಥ ಗಂಗಾಕರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here