ಕಲಬುರಗಿ: ಇಲ್ಲಿನ ತಾವರಗೇರ್ ಉತಾರ್ ಹತ್ತಿರ 6 ಜನ ಯುವಕರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ತಲವಾರ್, ಲಾಂಗ್ ಇಟ್ಟುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ರೌಡಿ ನಿಗ್ರಹ ದಳದ ಪಿ.ಎಸ್.ಐ ವಾಹೇದ್ ಅಲಿ ಕೋತ್ವಾಲ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಬುಲಂದ ಪರವೇಜ್ ಕಾಲೋನಿ ನಿವಾಸಿಗಳಾದ ಮಿರ್ಜಾ ಸಲಮಾನ್ ಬೇಗ್(21), ಮಿರ್ಜಾ ಮುನವರ್ ಬೇಗ್ (24), ಶೇಕ ವಸೀಮ್ (22), ಫಿರದೋಸ್ ಕಾಲೋನಿ ಮೊಹ್ಮದ್ ರಫೀಕ್ (23), ಮೊಹಮ್ಮದ್ ಜುಬೇರ್ (21) ಹಾಗೂ ಮಾಲಗತ್ತಿ ಕ್ರಾಸ್ ನ ಮಾಜಿದ್ ಹುಸೇನ್ (19) ಬಂಧಿತ ಆರೋಪಗಳು.
ಬುಧವಾರ 7 ಗಂಟೆ ಸುಮಾರಿಗೆ ಕಲಬುರಗಿ ಪೊಲೀಸ್ ಇಲಾಖೆಯ ರೌಡಿ ನಿಗ್ರಹ ದಳದ ಪಿ.ಎಸ್.ಐ ವಾಹೇದ್ ಅಲಿ ಕೋತ್ವಾಲ್ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಬಾಸು ಚೌವ್ಹಾಣ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜಕುಮಾರ್ ಗಂಧೆ, ಈರಣ್ಣ ತಳವಾರ್, ರಾಜು, ತೌಶಿಫ್, ಶಿವಾನಂದ ಧಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಗಳಿಂದ 2 ಹರಿತವಾದ ಉದ್ದನೆಯ ತಲವಾರ್, 2 ಉದ್ದನೆಯ ಲಾಂಗ್, 1 ಸಣ್ಣ ಲಾಂಗ್, 6 ಮುಖದ ಕರವಸ್ತ್ರ, ಹಗ್ಗ, ಖಾರದಪುಡಿ, 5 ಮುಬೈಲ್ ಗಳು ಜಪ್ತಿ ಮಾಡಿಕೊಂಡು ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.