ಇಷ್ಟೆಲ್ಲ ವಿರೋಧವಿದ್ದಾಗಲೂ ಜಾರಿ ಮಾಡುವ ಅವಶ್ಯಕತೆ ಮೋದಿಜಿಗೇಕೆ?

0
60

ಯಾರಿಗಾಗಿ ಇಷ್ಟೆಲ್ಲ ಕಸರತ್ತು. ಇಷ್ಟೊಂದು ಹಠ ಈ ದೇಶದ ಪ್ರಧಾನಿ ಹುದ್ದೆಯಲ್ಲಿದ್ದವರಿಗೆ ಇರಬಾರದು. ಗಾಂಧೀಜಿ ಸಾಯುತ್ತಾರೆಂಬ ಕಾರಣಕ್ಕೆ ಬಾಬಾ ಸಾಹೇಬರು ದಲಿತರಿಗೆ ಪ್ರತ್ಯೇಕ ಮತದಾನ ಪದ್ದತಿಯನ್ನು ಕೈ ಬಿಟ್ಟರು.

ನಿಜವಾಗ್ಲೂ ರೈತ ಕುಟುಂಬಕ್ಕೆ ಒಳ್ಳೆಯದ್ದು ಮಾಡುವ ಮನಸ್ಸಿದ್ದರೆ ಬೀಜˌ ಗೊಬ್ಬರ ಫ್ರೀಯಾಗಿ ಕೊಡಿ. ಅತಿ ಹೆಚ್ಚು ಉತ್ಪಾದನೆಯಾದರೆ ವಿದೇಶಕ್ಕೆ ರಪ್ತು ಮಾಡಿ. ಇನ್ನೂ ಹೆಚ್ಚಿನ ಪ್ರೀತಿ ರೈತರ ಮೇಲಿದ್ದರೆ ರೈತನ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿ.

Contact Your\'s Advertisement; 9902492681

ಕೆಂಪು ಕೋಟೆ ಹತ್ತಿ ಧ್ವಜ ಕಿತ್ತು ಹಾಕಿ ಅವರ ಭಾವುಟ ಹಾರಿಸಲು ಬಿಟ್ಟು ನೀವೇಲ್ಲಿ ಹೋಗಿ ಕುಂತ್ರಿ? ಅವರನ್ನು ತಡೆಯುವ ಶಕ್ತಿ ಈ ದೇಶದ ಪ್ರಧಾನಿ ಹುದ್ದೆಗಿಲ್ಲವೇ? ಖಂಡಿತ ಇದೆ. ನಿಮ್ಮ ಬಗ್ಗೆ ಅನುಕಂಪ ಹುಟ್ಟಲಿ ಎಂದು ನೀವೇ ಹಾಗೆ ಆಟವಾಡಿಸುತ್ತಿದ್ದೀರಿ. ಅಥವಾ ನಿಮ್ಮವರಿಗೆ ಸಹಾಯ ಮಾಡಲು ಅವರನ್ನು ಕೊರೆಯುವ ಚಳಿಯಲ್ಲಿ ನಡುಗಿಸುತ್ತಿದ್ದಿರಿ.

ನಿಮ್ಮಂತ ಹ್ರದಯವಿಲ್ಲದ ಕಟುಕರನ್ನು ವಿರೋಧಿಸುವ ಸಲುವಾಗಿ ಕೊರೆಯುವ ಚಳಿಯಲ್ಲಿ ರೈತ ಬೀದಿಯಲ್ಲಿ ನಿಂತಿದ್ದಾನೆ. ಅವರದೆ ಸರ್ಕಾರ. ಅವರದೇ ಪೊಲೀಸರು. ಅವರದೇ ಪಿತೂರಿಗಾರರು.ಇಷ್ಟಿದ್ದರೂ ತಪ್ಪು ಮಾತ್ರ ರೈತರದು ಎಂದು ಬಿಂಬಿಸುತ್ತಿದ್ದಾರೆ ಕೆಲವರು ಇದು ನಿಲ್ಲಬೇಕು.

ಇಷ್ಟು ದಿನ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರು ದಿಢೀರ್ ಹಿಂಸಾಚಾರಕ್ಕೆ ಹೋಗ್ತಾರೆ ಅಂದ್ರೆ ನಂಬಬೇಕೆ? ಇಷ್ಟು ತಾಳ್ಮೆ ಪರಿಕ್ಷಿಸುವುದು ನಿಮ್ಮ ತಪ್ಪಲ್ಲವೆ? ಚಳಿ ಹೋಗಲಾಡಿಸಲು ಮೈ ಬಿಸಿ ಮಾಡಿಕೊಳ್ಳಬೇಕೆಂದು ರೈತ ಬೆಂಕಿ ಹಚ್ಚಿದರೆ ಆ ಬೆಂಕಿಯನ್ನು ಕಾಂಗ್ರೆಸ್ ರೈತನಿಗಿಂತ ಮುಂಚೆ ಕಾಯಿಸಿಕೊಳ್ಳುತ್ತಿದೆ.

ಡಾ.ಅಶೋಕ ದೊಡ್ಮನಿ ಜೇವರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here