ಕಲಬುರಗಿ: ಶಿಕ್ಷಣ ತಜ್ಞ ,ಸಾಮಾಜಿಕ ಹೋರಾಟಗಾರ ಎಂ ಬಿ ಅಂಬಲಗಿ ಅವರ ನಿಧನಕ್ಕೆ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅಂಬಾರಾಯ ಅಷ್ಠಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಶೈಕ್ಷಣಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟಗಳಿಂದ ತಮ್ಮನ್ನು ಗುರುತಿಸಿಕೊಂಡಿದ್ದ ಅಂಬಲಗಿ ಯವರು ಶಿಕ್ಷಕರ ಹಾಗೂ ವಿಧ್ಯಾರ್ಥಿಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು, ಎಂ ಬಿ ಅಂಬಲಗಿ ಅವರ ಸಾವು ಅಘಾತ ಹಾಗೂ ನೋವುಂಟು ಮಾಡಿದೆ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನೀಡಲೇಂದು ಭಗವಂತನಲ್ಲಿ ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ