ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದ ಎಂ. ಚಂದ್ರಶೇಖರ್ ಗೆ ಸನ್ಮಾನ

0
67

ಮೈಸೂರು: ಇಂದು ನಗರದ ಅಗ್ರಹಾರದ ವೃತ್ತದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಎಂ.ಚಂದ್ರಶೇಖರ್ ರವರ ಹುಟ್ಟು ಹಬ್ಬದ ಸಲುವಾಗಿ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ವತಿಯಿಂದ ದೇವರಿಗೆ ಪೂಜೆ ಸಲ್ಲಿಸಿ ,ಅಭಿನಂದಿಸಿ ಸಿಹಿ ವಿತರಣೆ ಮಾಡಲಾಯಿತು.

ಎಂ.ಚಂದ್ರಶೇಖರ್ ರವರು 1989 ರಲ್ಲಿ ಕನ್ನಡ ಸಾಹಿತ್ಯ ಕಲಾ ಕೂಟದ ಮೂಲಕ ಸಾಹಿತ್ಯ,ಸಾಂಸ್ಕೃತಿಕ, ಹೋರಾಟಕ್ಕೆ ಪಾದಾರ್ಪಣೆ ಗೊಂಡರು,ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಕನ್ನಡ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಗಿ 400 ಕ್ಕೂ ಹೆಚ್ಚು ಕಾರ್ಯಕ್ರಮ,8 ತಾಲ್ಲೂಕು,5 ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನೆಡಸಿ ಮೈಸೂರು ಬಸವಕೇಂದ್ರದಲ್ಲಿ 200 ಕ್ಕೂ ಹೆಚ್ಚು ಶರಣ ಸಂಗಮ ಸಂಘಟಿಸಿದ್ದಾರೆ,ಪ್ರಸ್ತುತ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗ್ರಾಮ, ಗ್ರಾಮಗಳಿಗೆ ಶರಣರ ಬದುಕು ,ವಚನಗಳನ್ನು ವಿಸ್ತರಿಸಿದ್ದಾರೆ.

Contact Your\'s Advertisement; 9902492681

ಕವಿಯಾಗಿ,ಲೇಖಕರಾಗಿ,ಸಂಘಟಕರಾಗಿ,ಹೋರಾಟಗಾರರಾಗಿ 30 ವರ್ಷಗಳು ನಿರಂತರವಾಗಿ ತೊಡಗಿಸಿಕೊಂಡು ಮೈಸೂರು ನಗರ ಕನ್ನಡ ಜಾಗೃತ ಸಮಿತಿ ಸದಸ್ಯರಾಗಿ ನಗರಾದಾದ್ಯಂತ ಕನ್ನಡ ನಾಮಫಲಕ, ಕಚೇರಿಯಲ್ಲಿ ಕನ್ನಡದಲ್ಲಿ ವ್ಯವಹರಿಸುವಂತೆ ಎಚ್ಚರಿಕೆ ಕೆಲಸ ಮಾಡುವ ಮೂಲಕ ಬಿಂಬಿಸಿಕೊಂಡಿದ್ದಾರೆ, ಅರಸು ಪ್ರತಿಮೆ ಪ್ರತಸ್ಥಾಪನ ಸಮಿತಿಯ ಗೌರವ ಅಧ್ಯಕ್ಷರಾಗಿ ಮೈಸೂರಿನ ಹೃದಯ ಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸು ಪ್ರತಿಮೆ ಮಾಡುವಂತೆ ನಿರಂತರ ಹೋರಾಟ ನೆಡೆಸುತ್ತಿದ್ದಾರೆ,ಇದೀಗ 55 ವರ್ಷಗಳ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಂದ್ರಶೇಖರ್ ರವರಿಗೆ ಅವರ ಹೋರಾಟದ ಸಂಘಟನೆ ಶಕ್ತಿ ಇನ್ನಷ್ಟು ವೃದ್ಧಿಸಲಿ ಎಂದು ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಪರವಾಗಿ ಶುಭ ಕೊರಲಾಯಿತು.

ಈ ಸಂದರ್ಭದಲ್ಲಿ ಕ.ಸಾ.ಪ.ಮಾಜಿ ಅಧ್ಯಕ್ಷರಾದ ಶ್ರೀ ಮಡ್ದಿಕೆರೆ ಗೋಪಾಲ್, ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್, ರಾಜ್ಯ ಪ್ರಧಾನ ಸಂಚಾಲಕರಾದ ಡೈರಿ ವೆಂಕಟೇಶ್, ಜಿಲ್ಲಾ ನಗರ ಪ್ರಧಾನ ಸಂಚಾಲಕ ಎ. ಹೆಚ್.ಕೃಷ್ಣೇಗೌಡ, ಕನ್ನಡ ಚಳುವಳಿ ಹೋರಾಟಗಾರರಾದ ಶಿವಶಂಕರ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here