ಕಲಬುರಗಿ: ಉಪನ್ಯಾಸಕ, ಹೋರಾಟಗಾರ, ರಾಜಕೀಯ ಮುಖಂಡ ಎಂ.ಬಿ. ಅಂಬಲಗಿ (57) ಅವರು ನಿನ್ನೆ ತಡರಾತ್ರಿ ಲಿಂಗೈಕ್ಯರಾಗಿದ್ದಾರೆ.
ಲಘು ಹೃದಯಾಘಾತವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತುತ್ತಿದ್ದ ಅವರಿಗೆ ಸ್ಟಂಟ್ ಅಳವಡಿಸಲಾಗಿತ್ತು. 371 ಕಲಂ ಜಾರಿಗೆ ಒತ್ತಾಯಿಸಿ ಮಾಜಿ ಸಚಿವ ವೈಜನಾಥ ಪಾಟೀಲ ಅವರೊಂದಿಗೆ ಗುರುತಿಸಿಕೊಂಡಿದ್ದ ಅವರು ಶಿಕ್ಷಕರ ಕ್ಷೇತ್ರದಿಂದ ಇದ್ದ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಸ್ಪರ್ದೆ ಮಾಡಿ ಸೋಲು ಅನುಭವಿಸಿದ್ದರು. ಮೊನ್ನೆ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಟಿಕೆಟ್ ಕೇಳಿದ್ದರು. ಆದರೆ ಇವರಿಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ತೀವ್ರ ಬೇಜಾರುಗೊಂಡಿದ್ದರು. ಅಂತೆಯೇ ಇವರನ್ನು ಸಮಾಧಾನಪಡಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಖುದ್ದಾಗಿ ಇವರ ಮನೆಗೆ ಆಗಮಿಸಿ ಸಮಾಧಾನ ಹೇಳಿ ಹೋಗಿದ್ದರು.
ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಬ್ಯಾಂಕ್ ಗಳಲ್ಲಿ ಕೊಡಿಸುವುದುಸಾಲ ಕೊಡಿಸುವುದು ಸೇರಿದಂತೆ ಹಲವಾರು ಶೈಕ್ಷಣಿಕ ವಲಯದ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸುತ್ತಿದ್ದರು.
ಶೋಕ: ಮುಖಂಡರಾದ ಸುಭಾಷ ರಾಠೋಡ, ಮನೋಹರ ಪೋತ್ದಾರ, ಬಸವರಾಜ ವಾಲಿ, ಸೋಮಶೇಖರ ಗೋನಾಯಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ, ಪ್ರಕಾಶಕ ಬಸವರಾಜ ಕೊನೆಕ್, ಪತ್ರಕರ್ತ-ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ, ಡಾ. ಶಿವರಂಜನ್ ಸತ್ಯಂಪೇಟೆ ಹಾಗೂ ಸಿ.ಎಸ್.ಮುಧೋಳ, ರವೀಂದ್ರ ಶಾಬಾದಿ ಶ್ರೀಶೈಲ ಗಂವ್ಹಾರ ಡಾ. ಕಲ್ಯಾಣರಾವ ಜಿ. ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ ಬಡಿಗೇರ,ನ್ಯಾಯವಾದಿಳಾದ ಶಿವರಾಜ ಅಂಡಗಿ, ವಿನೋದ ಜನವೇರಿ, ಪ್ಯಾಶನ್ ಪೀಪಲ್ ಪತ್ರಿಕೆ ಸಂಪಾದಕ ಮಲ್ಲಿಕಾರ್ಜುನ ವಿ.ಎನ್., ಇಲ್ಲಿಯ ಜನ ಪತ್ರಿಕೆ ಸಂಪಾದಕ ಚಂದ್ರಕಾಂತ ಹಾವನೂರ, ಡಾ. ರಾಜಶೇಖರ ಮಾಂಗ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.